Select Your Language

Notifications

webdunia
webdunia
webdunia
webdunia

ಯೂ ಟ್ಯೂಬ್ ವ್ಯೂ ಬಗ್ಗೆ ಸತ್ಯ ಹೇಳಿ ವೈರಲ್ ಆದ ವಿಕ್ರಾಂತ್ ರೋಣ ನಿರ್ಮಾಪಕ

webdunia
ಬೆಂಗಳೂರು , ಮಂಗಳವಾರ, 18 ಜನವರಿ 2022 (09:50 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ನಿರ್ಮಾಪಕ ಜಾಕ್ ಮಂಜು ಯೂ ಟ್ಯೂಬ್ ವ್ಯೂ ಬಗ್ಗೆ ಅಸಲಿ ಸತ್ಯವನ್ನು ತೆರೆದಿಟ್ಟು ಈಗ ಕೆಲವು ವರ್ಗದವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಯೂ ಟ್ಯೂಬ್ ನಲ್ಲಿ ಲಕ್ಷ, ಮಿಲಿಯನ್ ವ್ಯೂ ಬಂದಿದೆ ಎಂದು ಹಲವು ಸಿನಿಮಾಗಳ ಟ್ರೈಲರ್, ಟೀಸರ್ ಗಳನ್ನು ಪ್ರಚಾರ ಮಾಡಲಾಗುತ್ತದೆ. ಆದರೆ ಇದೆಲ್ಲಾ ಹಣ ಪಡೆದು ಹೆಚ್ಚು ವ್ಯೂ ಪಡೆದುಕೊಂಡು ಗಿಮಿಕ್ ಮಾಡುವುದಷ್ಟೇ ಎಂದು ಸಂದರ್ಶನವೊಂದರಲ್ಲಿ ಮಂಜು ಹೇಳಿದ್ದರು.

ಆದರೆ ಅವರ ಈ ಹೇಳಿಕೆ ಕೆಲವು ಸ್ಟಾರ್ ನಟರ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದೆ. ಮೊದಲ ಎರಡು ದಿನ ಯೂ ಟ್ಯೂಬ್ ನಲ್ಲಿ ವ್ಯೂ ಹೆಚ್ಚಿಸಲು 2 ರಿಂದ 2.3 ಲಕ್ಷ ರೂ.ಗಳವರೆಗೆ ಯೂ ಟ್ಯೂಬ್ ಗೆ ಹಣ ಕೊಡುತ್ತಾರೆ. ಆ ಮೂಲಕ ಸಿನಿಮಾ ಟೀಸರ್, ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ ಎಂದು ನಂಬಿಸುತ್ತಾರೆ ಎಂದು ಜಾಕ್ ಮಂಜು ಹೇಳಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ರಜನಿಕಾಂತ್ ಪುತ್ರಿ ಐಶ್ವರ್ಯಾ, ನಟ ಧನುಷ್ ದಾಂಪತ್ಯ ಜೀವನ ಅಂತ್ಯ