Select Your Language

Notifications

webdunia
webdunia
webdunia
webdunia

ರಜನಿಕಾಂತ್ ಪುತ್ರಿ ಐಶ್ವರ್ಯಾ, ನಟ ಧನುಷ್ ದಾಂಪತ್ಯ ಜೀವನ ಅಂತ್ಯ

ರಜನಿಕಾಂತ್ ಪುತ್ರಿ ಐಶ್ವರ್ಯಾ, ನಟ ಧನುಷ್ ದಾಂಪತ್ಯ ಜೀವನ ಅಂತ್ಯ
ಚೆನ್ನೈ , ಮಂಗಳವಾರ, 18 ಜನವರಿ 2022 (08:50 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಪುತ್ರಿ ಐಶ್ವರ್ಯಾ ಮತ್ತು ನಟ ಧನುಷ್ ತಮ್ಮ 18 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಇಬ್ಬರೂ ಸಾಮಾಜಿಕ ಜಾಲತಾಣದ ಮೂಲಕ ಪ್ರಕಟಣೆ ನೀಡಿದ್ದಾರೆ. ನಾವಿಬ್ಬರೂ ವಿಚ್ಛೇದನ ಪಡೆಯುತ್ತಿರುವುದಾಗಿ ಧನುಷ್ ಹಾಗೂ ಐಶ್ವರ್ಯಾ ಘೋಷಿಸಿದ್ದಾರೆ.

’18 ವರ್ಷಗಳ ಕಾಲ ಸ್ನೇಹಿತರಾಗಿ, ದಂಪತಿಗಳಾಗಿ ಜೊತೆಯಾಗಿ ಜೀವನ ನಡೆಸಿದ್ದೇವೆ. ಇಂದು ನಾವಿಬ್ಬರೂ ನಮ್ಮ ದಾರಿಯಲ್ಲಿ ಪ್ರತ್ಯೇಕವಾಗಿ ನಡೆಯಲು ನಿರ್ಧರಿಸಿದ್ದೇವೆ. ನಾನು ಮತ್ತು ಐಶ್ವರ್ಯಾ ದಂಪತಿಯಾಗಿ ಪ್ರತ್ಯೇಕವಾಗಲು ನಿರ್ಧರಿಸಿದ್ದೇವೆ ಮತ್ತು ವೈಯಕ್ತಿಕವಾಗಿ ನಮ್ಮನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಲಿದ್ದೇವೆ. ನಮ್ಮ ನಿರ್ಧಾರ ಗೌರವಿಸಿ, ನಮ್ಮ ಖಾಸಗಿತನಕ್ಕೆ ಬೆಲೆ ಕೊಡಿ’ ಎಂದು ಧನುಷ್ ಟ್ವೀಟ್ ಮಾಡಿದ್ದಾರೆ. ಐಶ್ವರ್ಯಾ ಕೂಡಾ ಇದೇ ಟ್ವೀಟ್ ಮಾಡಿದ್ದಾರೆ.

ಇದರೊಂದಿಗೆ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿಯ ದಾಂಪತ್ಯ ಜೀವನ ಮುರಿದುಬಿದ್ದಿದೆ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೀರಿಯಲ್ ಶೂಟಿಂಗ್ ಬಂದ್ ಮಾಡಿಸಿದ ಪೊಲೀಸರು