Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಗೆ ನಕಲಿ ಸುದ್ದಿ ತಂದ ಫಜೀತಿ

ಕಿಚ್ಚ ಸುದೀಪ್
ಬೆಂಗಳೂರು , ಬುಧವಾರ, 5 ಜನವರಿ 2022 (10:30 IST)
ಬೆಂಗಳೂರು: ಸ್ಟಾರ್ ನಟರು ಎಂದ ಮೇಲೆ ಸತ್ಯವೋ, ಸುಳ್ಳೋ ದಿನಾ ಒಂದೊಂದು ಸುದ್ದಿ ಹರಿದಾಡುತ್ತಲೇ ಇರುತ್ತದೆ. ಇದೀಗ ಕಿಚ್ಚ ಸುದೀಪ್ ಬಗ್ಗೆ ನಕಲಿ ಸುದ್ದಿಯೊಂದು ಓಡಾಡುತ್ತಿದ್ದು, ನಟನನ್ನು ಫಜೀತಿಗೆ ಸಿಲುಕಿಸಿದೆ.

ಕಿಚ್ಚ ಸುದೀಪ್ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು, ಇದಕ್ಕೆ ನಮಸ್ತೆ ಘೋಷ್ ಎಂದು ಹೆಸರಿಡಲಾಗಿದೆ. ಈ ಸಿನಿಮಾವನ್ನು ‘ಸಾಹೋ’ ಸಿನಿಮಾ ಖ್ಯಾತಿಯ ನಿರ್ದೇಶಕ ಸುಜಿತ್ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಇದನ್ನೇ ಸತ್ಯವೆಂದು ನಂಬಿ ಹಲವರು ಈ ಸುದ್ದಿಯನ್ನು ಶೇರ್ ಮಾಡಿದ್ದರು.

ಆದರೆ ಅಸಲಿಗೆ ಸುದೀಪ್ ಇಂತಹದ್ದೊಂದು ಸಿನಿಮಾವನ್ನೇ ಒಪ್ಪಿಕೊಂಡಿಲ್ಲ. ಯಾರೋ ಬೇಕಂತಲೇ ಸುದೀಪ್ ಹೆಸರಿನಲ್ಲಿ ಇಂತಹದ್ದೊಂದು ಸುಳ್ಳು ಸುದ್ದಿ ಹರಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ದುರುಪಯೋಗಕ್ಕೆ ಲಾಕ್ ಡೌನ್ ಮಾಡಬೇಡಿ: ದುನಿಯಾ ವಿಜಯ್