Select Your Language

Notifications

webdunia
webdunia
webdunia
webdunia

ನೀವೇನು ದೊಡ್ಡ ಡಾನಾ? ರಾಜ್ ಬಿ ಶೆಟ್ಟಿಗೆ ಶಿವಣ್ಣ ಆವಾಜ್!

ನೀವೇನು ದೊಡ್ಡ ಡಾನಾ? ರಾಜ್ ಬಿ ಶೆಟ್ಟಿಗೆ ಶಿವಣ್ಣ ಆವಾಜ್!
ಬೆಂಗಳೂರು , ಮಂಗಳವಾರ, 4 ಜನವರಿ 2022 (16:22 IST)
ಬೆಂಗಳೂರು: ನೀವೇನು ದೊಡ್ಡ ಡಾನಾ? ಮಂಗಳದೇವಿ ಹತ್ರ ಬರ್ಲಾ? ಹೀಗಂತ ಶಿವರಾಜ್ ಕುಮಾರ್ ನಟ ರಾಜ್ ಬಿ ಶೆಟ್ಟಿಗೆ ಆವಾಜ್ ಹಾಕಿದ್ದಾರೆ!

ಸಾಮಾನ್ಯವಾಗಿ ಶಿವಣ್ಣ ಹೀಗೆ ಯಾರೊಂದಿಗೂ ಮಾತನಾಡಿದ ಉದಾಹರಣೆಯೇ ಇರಲ್ಲ. ಆದರೆ ಈಗ ರಾಜ್ ಶೆಟ್ಟಿಗೆ ಈ ರೀತಿ ಯಾಕೆ ಮಾತಾಡಿದ್ರು ಅಂತ ಅಚ್ಚರಿಯಾಗಬೇಡಿ. ಇದು ಕೇವಲ ತಮಾಷೆಗಾಗಿ ನಡೆದ ಫೋನ್ ಇನ್ ಸಂಭಾಷಣೆಯಷ್ಟೇ.

ರಾಜ್ ಬಿ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಗರುಡಗಮನ ವೃಷಭ ವಾಹನ ಸಿನಿಮಾ ಜೀ5 ನಲ್ಲಿ ಇದೇ 13 ರಿಂದ ಪ್ರಸಾರವಾಗಲಿದೆ. ಈ ಸಿನಿಮಾಗೆ ಪ್ರಚಾರ ಕೊಡುವ ಉದ್ದೇಶದಿಂದ ಶಿವಣ್ಣ ಇಂತಹದ್ದೊಂದು ನಾಟಕವಾಡಿದ್ದಾರೆ. ಮೊದಲಿಗೆ ಯಾರೋ ತನಗೆ ಆವಾಜ್ ಹಾಕುತ್ತಾರೆಂದು ರಾಜ್ ಬಿ ಶೆಟ್ಟಿ ಕೂಡಾ ಗಂಭೀರವಾಗಿಯೇ ಮಾತನಾಡುತ್ತಾರೆ. ಬಳಿಕ ಶಿವಣ್ಣ ಎಂದು ಗೊತ್ತಾಗುತ್ತಿದ್ದಂತೆ ನಕ್ಕು ಬಿಡುತ್ತಾರೆ. ಕೊನೆಗೆ ರಾಜ್ ಬಿ ಶೆಟ್ಟಿ ನಟನೆಯನ್ನು ಶಿವಣ್ಣ ಕೊಂಡಾಡುತ್ತಾರೆ. ಈ ರೀತಿ ಇಬ್ಬರೂ ಸಿನಿಮಾ ಪ್ರಚಾರ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಆಂಕರ್ ಅನುಶ್ರೀ