ಬೆಂಗಳೂರು: ಬಡವ ರಾಸ್ಕಲ್ ಈವೆಂಟ್ ನಲ್ಲಿ ನಟ ಶಿವರಾಜ್ ಕುಮಾರ್ ಕನ್ನಡ ಬಾವುಟ ಸುಟ್ಟ ಪ್ರಕರಣದ ಬಗ್ಗೆ ಮಾತನಾಡುವಾಗ ಭಾವುಕರಾಗಿ ಕನ್ನಡಕ್ಕಾಗಿ ಸಾಯೋದಕ್ಕೂ ಸಿದ್ಧ ಎಂದಿದ್ದರು. ಈ ಮಾತು ಸ್ಯಾಂಡಲ್ ವುಡ್ ನಟರನ್ನು ಭಾವುಕರಾಗಿಸಿದೆ.
ವೇದಿಕೆಯಲ್ಲಿ ಧ್ವಜಕ್ಕೆ ಹಾನಿಯಾದ ಬಗ್ಗೆ ಮಾತನಾಡುವ 60 ವರ್ಷ ಸಾಕಿದ್ದೀರಿ ನನ್ನ. ಇನ್ನು ಮುಂದೆ ಭಾಷೆಗೋಸ್ಕರ ಹೋರಾಡಿ ಸಾಯಬೇಕು ಎಂದರೆ ನನ್ನ ಜೀವ ಹೋದರೂ ಪರವಾಗಿಲ್ಲ ಎಂದು ವೇದಿಕೆ ಮೇಲೆ ಭಾವುಕರಾಗಿ ಶಿವಣ್ಣ ಮಾತನಾಡಿದ್ದರು.
ಅವರು ಈ ಮಾತು ಹೇಳುತ್ತಿದ್ದಂತೇ ಅಲ್ಲೇ ಇದ್ದ ನಟಿ ತಾರಾ ಹೀಗೆಲ್ಲಾ ಮಾತಾಡ್ಬೇಡಿ ಎನ್ನುತ್ತಾರೆ. ಅಲ್ಲದೆ, ವೇದಿಕೆ ಮೇಲೆ ಬಂದ ಡಾಲಿ ಧನಂಜಯ್ ನೀವು ಸಾಯೋ ಮಾತಾಡ್ಬೇಡಿ ಅಣ್ಣ. ನಾವು ಇಲ್ಲಿರೋ ಎಲ್ಲರೂ ಒಂದೊಂದು ವರ್ಷ ನಿಮಗೇ ಕೊಡ್ತೀವಿ. ಅಷ್ಟು ವರ್ಷ ನೀವು ಬದುಕಬೇಕು ಅಣ್ಣ ಎಂದು ಭರವಸೆ ತುಂಬಿದ್ದಾರೆ. ಸಹೋದರ ಪುನೀತ್ ಸಾವನ್ನಪ್ಪಿದ ಬಳಿಕ ಶಿವಣ್ಣ ಯಾವುದೇ ವೇದಿಕೆಗೆ ಬಂದರೂ ಭಾವುಕರಾಗುತ್ತಾರೆ. ಇಂದೂ ಕೂಡಾ ಅಷ್ಟೇ ಭಾವುಕರಾಗಿ ಮಾತನಾಡಿದ್ದರು.