Publish Date: Mon, 20 Dec 2021 (09:30 IST)
Updated Date: Mon, 20 Dec 2021 (09:51 IST)
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿರುವ ಬಗ್ಗೆ ಈಗಾಗಲೇ ತಿಳಿದುಬಂದಿದೆ.
ಈ ಸಿನಿಮಾ ಡಿಸೆಂಬರ್ 23 ರಂದು ಒಟಿಟಿಯಲ್ಲಿ ರಿಲೀಸ್ ಆಗುವುದು ಪಕ್ಕಾ ಆಗಿದೆ. ಜೀ5 ಆಪ್ ನಲ್ಲಿ ಗುರುವಾರ ಸಿನಿಮಾ ಪ್ರಸಾರವಾಗಲಿದೆ.
ಅಕ್ಟೋಬರ್ 29 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಿದ್ದ ಆಕ್ಷನ್ ಎಂಟರ್ ಟೈನರ್ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿತ್ತು. ಎ. ಹರ್ಷ ನಿರ್ದೇಶನದ ಸಿನಿಮಾದಲ್ಲಿ ಶಿವಣ್ಣನಿಗೆ ನಾಯಕರಾಗಿ ಭಾವನಾ ಮೆನನ್ ಅಭಿನಯಿಸಿದ್ದಾರೆ.