Select Your Language

Notifications

webdunia
webdunia
webdunia
webdunia

ಒಟಿಟಿಗೆ ಬರುತ್ತಿದೆ ಶಿವಣ್ಣ ಅಭಿನಯದ ಭಜರಂಗಿ 2

ಒಟಿಟಿಗೆ ಬರುತ್ತಿದೆ ಶಿವಣ್ಣ ಅಭಿನಯದ ಭಜರಂಗಿ 2
ಬೆಂಗಳೂರು , ಶುಕ್ರವಾರ, 17 ಡಿಸೆಂಬರ್ 2021 (11:34 IST)
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಭಜರಂಗಿ 2’ ಸಿನಿಮಾ ಈಗ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ.

ಕಳೆದ ತಿಂಗಳು ಥಿಯೇಟರ್ ನಲ್ಲಿ ಬಿಡುಗಡೆಯಾಗಿದ್ದ ಭಜರಂಗಿ 2 ಉತ್ತಮ ರೆಸ್ಪಾನ್ಸ್ ಪಡೆದಿತ್ತು. ಈ ಸಿನಿಮಾ ರಿಲೀಸ್ ದಿನವೇ ಪುನೀತ್ ರಾಜ್ ಕುಮಾರ್ ತೀರಿಕೊಂಡಿದ್ದರಿಂದ ಗಳಿಕೆ ಮೇಲೆ ಕೊಂಚ ಹೊಡೆತ ಬಿದ್ದಿತ್ತು. ಆದರೆ ಬಳಿಕ ಚೇತರಿಸಿಕೊಂಡಿತು.

ಈ ಸಿನಿಮಾ ಡಿಜಿಟಲ್ ಹಕ್ಕನ್ನು ಜೀ ಕನ್ನಡ ಪಡೆದುಕೊಂಡಿತ್ತು. ಹೀಗಾಗಿ ಜೀ5 ಒಟಿಟಿ ಫ್ಲ್ಯಾಟ್ ಫಾರಂನಲ್ಲಿ ಸಿನಿಮಾ ಸದ್ಯದಲ್ಲೇ ತೆರೆ ಕಾಣುತ್ತಿದೆ. ಎ ಹರ್ಷ ನಿರ್ದೇಶನದ ಸಿನಿಮಾದಲ್ಲಿ ಶಿವಣ್ಣ ಜೊತೆ ಭಾವನಾ ಮೆನನ್, ಶ್ರುತಿ ಮುಂತಾದವರು ಅಭಿನಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಬ್ಜ ಶೂಟಿಂಗ್ ನಲ್ಲಿ ಕಿಚ್ಚ ಸುದೀಪ್: ಕಿಚ್ಚನ ಹೊಸ ಲುಕ್ ಬಹಿರಂಗ