Publish Date: Thu, 16 Dec 2021 (10:43 IST)
Updated Date: Thu, 16 Dec 2021 (10:44 IST)
ಬೆಂಗಳೂರು: ಮಕ್ಕಳೇ ನನಗೆ ಊಟದಲ್ಲಿ ವಿಷ ಹಾಕಿ ಕೊಲ್ಲಲು ಯತ್ನಿಸುತ್ತಿದ್ದಾರೆ ಎಂದು ಸ್ಯಾಂಡಲ್ ವುಡ್ ನ ಹಿರಿಯ ನಟ ಅಶ್ವತ್ಥ್ ನಾರಾಯಣ್ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಡಾ.ರಾಜ್ ಸೇರಿದಂತೆ ಅನೇಕ ನಟರೊಂದಿಗೆ ಪೋಷಕ ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ನಟನಿಗೆ ಮಗ ಮತ್ತು ಮಗಳೇ ಕಾಟ ಕೊಡುತ್ತಿದ್ದಾರಂತೆ. ಸರಿಯಾಗಿ ಊಟ ತಿಂಡಿಯೂ ಕೊಡುತ್ತಿಲ್ಲ. ಪಕ್ಕದ ಮನೆಯವರ ಸಹಾಯ ಕೇಳಿದರೆ ಅವರ ಜೊತೆಗೂ ಗಲಾಟೆ ಮಾಡುತ್ತಾರೆ ಎಂದು ದೂರಿದ್ದಾರೆ.
ಮಗ ಉದಯ್ ಹಾಗೂ ಮಗಳು ವಸುಂಧರಾ ಜೊತೆಗೆ ಪತ್ನಿಯೂ ಸೇರಿಕೊಂಡು ನನಗೆ ಕಾಟ ಕೊಡುತ್ತಿದ್ದಾರೆ. ಹೀಗಾಗಿ ಯಾವುದಾದರೂ ಅನಾಥಾಶ್ರಮಕ್ಕೆ ಸೇರಿಸಿ ಎಂದು ಹಿರಿಯ ನಟ ದೂರಿನಲ್ಲಿ ಮನವಿ ಮಾಡಿದ್ದಾರೆ.