Publish Date: Wed, 05 Jan 2022 (09:50 IST)
Updated Date: Wed, 05 Jan 2022 (10:02 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಜನವರಿ ತಿಂಗಳೆಂದರೆ ಹಬ್ಬ. ಯಾಕೆಂದರೆ ಜನವರಿ 7 ರಂದು ಯಶ್ ಹುಟ್ಟುಹಬ್ಬ.
ಕೊರೋನಾ ಕಾರಣದಿಂದ ಕೆಳದ ಎರಡು ವರ್ಷಗಳಿಂದ ಯಶ್ ಗೆ ಜನರೊಂದಿಗೆ ಬರ್ತ್ ಡೇ ಆಚರಿಸಿಕೊಳ್ಳಲು ಸಾಧ‍್ಯವಾಗಿಲ್ಲ. ಆದರೆ ಅವರ ಅಭಿಮಾನಿಗಳು ಮಾತ್ರ ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿಯೇ ಆಚರಿಸಲು ಸಿದ್ಧತೆ ನಡೆಸಿದ್ದಾರೆ.
ಯಶ್ ಅಭಿಮಾನಿಗಳ ಬಳಗ ಜನವರಿ 7 ರಂದು ಅನ್ನದಾಸೋಹ, ಪೂಜೆ, ಹವನ ಎಂದು ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಆದರೆ ಈ ಬಾರಿಯೂ ಯಶ್ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕಟ್ ಮಾಡುವ ಸಾಧ್ಯತೆಯಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಟ್ರೆಂಡ್ ಶುರುವಾಗಿದೆ.