Select Your Language

Notifications

webdunia
webdunia
webdunia
webdunia

ಲೂಸ್ ಮಾದ ಯೋಗಿ ಸಿನಿಮಾಗೆ ವಿನೋದ್ ಪ್ರಭಾಕರ್ ನಿರ್ಮಾಣ

ವಿನೋದ್ ಪ್ರಭಾಕರ್
ಬೆಂಗಳೂರು: ಮರಿ ಟೈಗರ್ ವಿನೋದ್ ಪ್ರಭಾಕರ್ ಈಗ ನಿರ್ಮಾಪಕರಾಗುತ್ತಿದ್ದಾರೆ. ಲೂಸ್ ಮಾದ ಯೋಗಿ ನಾಯಕರಾಗಿರುವ ಸಿನಿಮಾಗೆ ವಿನೋದ್ ಬಂಡವಾಳ ಹಾಕುತ್ತಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಅನೇಕ ನಟರು ಇತ್ತೀಚೆಗೆ ನಿರ್ಮಾಪಕರಾಗಿಯೂ ಸಕ್ಸಸ್ ಕಂಡಿದ್ದಾರೆ. ಆ ಸಾಲಿಗೆ ಈಗ ವಿನೋದ್ ಪ್ರಭಾಕರ್ ಸೇರ್ಪಡೆಯಾಗುತ್ತಿದ್ದಾರೆ. ‘ಟೈಗರ್ ಟಾಕೀಸ್’ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಿಮಾ ನಿರ್ಮಾಣ ಮಾಡುವ ಕನಸು ಹೊತ್ತಿದ್ದಾರೆ.

ಇದೀಗ ಲೂಸ್ ಮಾದ ಯೋಗಿ ಅಭಿನಯದ ‘ಲಂಕಾಸುರ’ ಎಂಬ ಆಕ್ಷನ್ ಥ್ರಿಲ್ಲರ್ ಸಿನಿಮಾವನ್ನು ನಿರ್ಮಿಸಲಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಪೋಸ್ಟರ್ ಕೂಡಾ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳಿನಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟ ನಟಿ ರಾಗಿಣಿ ದ್ವಿವೇದಿ