ಮೈಸೂರು: ಗಣರಾಜ್ಯೋತ್ಸವ ದಿನವನ್ನು ನಟ ಶಿವರಾಜ್ ಕುಮಾರ್ ದಂಪತಿ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ಡಾ. ರಾಜ್ ಕುಟುಂಬ ನಡೆಸಿಕೊಂಡು ಹೋಗುತ್ತಿರುವ ಶಕ್ತಿಧಾಮ ಅನಾಥ ಹೆಣ್ಣು ಮಕ್ಕಳ ಮಂದಿರಕ್ಕೆ ಭೇಟಿ ನೀಡಿ ಅವರೊಂದಿಗೆ ಕಾಲ ಕಳೆದಿದ್ದಲ್ಲದೆ, ಧ್ವಜಾರೋಹಣ ಮಾಡಿ ಗಣರಾಜ್ಯೋತ್ಸವ ಆಚರಿಸಿಕೊಂಡರು.
ಶಕ್ತಿಧಾಮದ ಹೆಣ್ಣು ಮಕ್ಕಳನ್ನು ಕೂರಿಸಿಕೊಂಡು ಬಸ್ ಚಾಲನೆ ಮಾಡಿ ಖುಷಿಪಟ್ಟರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.