Publish Date: Wed, 26 Jan 2022 (11:20 IST)
Updated Date: Wed, 26 Jan 2022 (11:23 IST)
ಬೆಂಗಳೂರು: ಗಣರಾಜ್ಯೋತ್ಸವದಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊನೆಯದಾಗಿ ನಾಯಕನಾಗಿ ಅಭಿನಯಿಸಿದ್ದ ಜೇಮ್ಸ್ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ.
ಈ ಪೋಸ್ಟರ್ ನಲ್ಲಿ ಪವರ್ ಸ್ಟಾರ್ ಭಾರತೀಯ ಯೋಧನಾಗಿ ಮಿಂಚಿದ್ದಾರೆ. ಸಲಾಂ ಸೋಲ್ಜರ್ ದೇಶಕ್ಕೆ ನೀನೇ ಪವರ್ ಎಂಬ ಅಡಿಬರಹದೊಂದಿಗೆ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ.
ಪುನೀತ್ ಹೊಸ ಪೋಸ್ಟರ್ ನೋಡಿದ ಅಭಿಮಾನಿಗಳು ಖುಷಿಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹೊಸ ಪೋಸ್ಟರ್ ವೈರಲ್ ಆಗಿದೆ. ಈ ಸಿನಿಮಾ ಪುನೀತ್ ಬರ್ತ್ ಡೇಗೆ ಅಂದರೆ ಮಾರ್ಚ್ 17 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.