ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯಿಸಿರುವ ಚಾರ್ಲಿ 777 ಸಿನಿಮಾಗೆ ಇತ್ತೀಚೆಗೆ ಸೆನ್ಸಾರ್ ಯು/ಎ ಸರ್ಟಿಫಿಕೇಟ್ ನೀಡಿದೆ. ಆದರೆ ಕೆಲವು ಅಭಿಮಾನಿಗಳು ಇದನ್ನು ಆಕ್ಷೇಪಿಸಿದ್ದಾರೆ.
ಚಾರ್ಲಿ 777 ಸಿನಿಮಾದಲ್ಲಿ ರಕ್ಷಿತ್ ಜೊತೆಗೆ ನಾಯಿಯೂ ಪ್ರಮುಖ ಪಾತ್ರ ವಹಿಸಿದೆ. ಈಗಾಗಲೇ ಈ ಸಿನಿಮಾ ಮಕ್ಕಳಿಗೂ ಇಷ್ಟವಾಗುವಂತಿದೆ. ಹೀಗಾಗಿ ಈ ಸಿನಿಮಾಗೆ ಕೇವಲ ಯೂನಿವರ್ಸಲ್ ಸರ್ಟಿಫಿಕೇಟ್ ನೀಡಬೇಕಿತ್ತು ಎಂಬುದು ಕೆಲವರ ಅಭಿಪ್ರಾಯ.
ಆದರೆ ಸಿನಿಮಾಗೆ ಯೂನಿವರ್ಸಲ್ ಜೊತೆಗೆ ಅಡಲ್ಟ್ ಎಂದು ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದೆ. ಅದೇನೇ ಇದ್ದರೂ ನಮ್ಮ ಜೊತೆಗೆ ಮಕ್ಕಳೂ ಸಿನಿಮಾ ನೋಡುವುದು ಗ್ಯಾರಂಟಿ ಎಂದಿದ್ದಾರೆ ಅಭಿಮಾನಿಗಳು.