Select Your Language

Notifications

webdunia
webdunia
webdunia
webdunia

ಅಮೃತವರ್ಷಿಣಿ ಸಿನಿಮಾಗೆ 25 ವರ್ಷ: ನೆನಪುಗಳಿಗೆ ಜಾರಿದ ರಮೇಶ್ ಅರವಿಂದ್

ರಮೇಶ್ ಅರವಿಂದ್
ಬೆಂಗಳೂರು , ಶನಿವಾರ, 29 ಜನವರಿ 2022 (09:40 IST)
ಬೆಂಗಳೂರು: ಕನ್ನಡ ಸಿನಿಮಾ ರಂಗ ಎಂದೆಂದಿಗೂ ನೆನಪಿಡುವಂತಹ ಸಿನಿಮಾಗಳಲ್ಲಿ ರಮೇಶ್ ಅರವಿಂದ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಅಮೃತವರ್ಷಿಣಿ ಸಿನಿಮಾವೂ ಒಂದು. ಈ ಸಿನಿಮಾ ಬಿಡುಗಡೆಯಾಗಿ 25 ವರ್ಷ ಕಳೆದಿದೆ.

ಈ ವಿಶೇಷ ಕ್ಷಣವನ್ನು ರಮೇಶ್ ಅರವಿಂದ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಮ್ಮ ಜೊತೆಗೆ ಅಂದು ನಟಿಸಿದ್ದ, ಹಾಡಿದ್ದ, ಸಿನಿಮಾದಲ್ಲಿ ಕೆಲಸ ಮಾಡಿದ್ದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.

ರಮೇಶ್ ಗೆ ಹೊಸ ಇಮೇಜ್ ಕೊಟ್ಟ ಸಿನಿಮಾವಿದು. ಇದರ ಹಾಡು ಇಂದಿಗೂ ಸೂಪರ್ ಹಿಟ್. ರಮೇಶ್ ಜೊತೆಗೆ ಸುಹಾಸಿನಿ, ಶರತ್ ಬಾಬು, ತಾರಾ, ನಿವೇದಿತಾ ಜೈನ್ ಮತ್ತಿತರರು ಅಭಿನಯಿಸಿದ್ದರು. ಜಯಶ್ರೀ ದೇವಿ ನಿರ್ಮಾಣದ ಸಿನಿಮಾದ ಹಾಡುಗಳನ್ನು ಕಲ್ಯಾಣ್ ರಚಿಸಿ, ದೇವ ಸಂಗೀತ ಸಂಯೋಜಿಸಿದ್ದರು. ಈ ಸಿನಿಮಾದ ಪ್ರತೀ ಹಾಡೂ ಹಿಟ್ ಆಗಿದ್ದವು. ಅಂದಿನಿಂದ ಇಂದಿನವರೆಗೆ ನನಗೆ ಪ್ರೀತಿ ತೋರಿದ ಕೈ ಹಿಡಿದು ನಡೆಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಂಪಾಟ ಸುದ್ದಿ ಬೆನ್ನಲ್ಲೇ ಗಟ್ಟಿಮೇಳ ನಟ ಅಭಿಷೇಕ್ ಬಗ್ಗೆ ಸುಳ್ಳು ಸುದ್ದಿ!