ಬೆಂಗಳೂರು: ಗಟ್ಟಿಮೇಳ ಧಾರವಾಹಿ ನಟರಾದ ರಕ್ಷ್, ಅಭಿಷೇಕ್ ಮತ್ತು ಸ್ನೇಹಿತರು ಹೋಟೆಲ್ ನಲ್ಲಿ ಪಾರ್ಟಿ ನಡೆಸಿ ಗಲಾಟೆ ಮಾಡಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ ಅಭಿಷೇಕ್ ಬಗ್ಗೆ ಸುಳ್ಳು ಸುದ್ದಿಯೊಂದು ಹರಿದಾಡಿದೆ.
ಹೋಟೆಲ್ ಗಲಾಟೆಯಲ್ಲಿ ಕೊರೋನಾ ನಿಯಮ ಉಲ್ಲಂಘಿಸಿದ್ದಕ್ಕೆ ನಟರ ವಿರುದ್ಧ ದಂಡ ವಿಧಿಸಲಾಗಿದೆ ಎನ್ನಲಾಗಿದೆ. ತಡರಾತ್ರಿವರೆಗೂ ಪಾರ್ಟಿ ಮಾಡಿದ್ದಕ್ಕೆ ದಂಡ ಕ್ರಮ ಕೈಗೊಳ್ಳಲಾಗಿತ್ತು.
ಆದರೆ ಇದರ ಬೆನ್ನಲ್ಲೇ ಅಭಿಷೇಕ್ ಬಗ್ಗೆ ಯೂ ಟ್ಯೂಬ್ ಚಾನೆಲ್ ಒಂದರಲ್ಲಿ ಸಾವಿನ ಬಗ್ಗೆ ಸುಳ್ಳು ಸುದ್ದಿ ಹರಿದಾಡಿತ್ತು. ಗಟ್ಟಿಮೇಳ ನಟ ಸಾವನ್ನಪ್ಪಿದ್ದಾರೆ ಎಂಬುದಾಗಿ ಸುದ್ದಿ ಹಾಕಲಾಗಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ಅಭಿಷೇಕ್, ನಾನಿನ್ನೂ ಜೀವಂತವಾಗಿದ್ದೇನೆ ಎಂದಿದ್ದಾರೆ. ಆದರೆ ಹೋಟೆಲ್ ಗಲಾಟೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.