Publish Date: Fri, 28 Jan 2022 (17:22 IST)
Updated Date: Fri, 28 Jan 2022 (17:24 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗಟ್ಟಿಮೇಳ ಧಾರವಾಹಿಯ ಕಲಾವಿದ, ನಿರ್ಮಾಪಕ ರಕ್ಷ್, ಅಭಿಷೇಕ್ ಮತ್ತಿತರ ಸ್ನೇಹಿತರು ಹೋಟೆಲ್ ಒಂದರಲ್ಲಿ ಕುಡಿದು ರಂಪಾಟ ಮಾಡಿದ್ದಾರೆ ಎಂದು ವರದಿಯಾಗಿದೆ.
ನಗರದ ಜಿಂಜರ್ ಲೇಕ್ ವ್ಯೂ ಹೋಟೆಲ್ ನಲ್ಲಿ ಘಟನೆ ನಡೆದಿದ್ದು, ತಡರಾತ್ರಿಯವರೆಗೂ ನಟ ಹಾಗೂ ಸ್ನೇಹಿತರ ಗುಂಪು ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಹೋಟೆಲ್ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿದ್ದಾರೆ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಬಂದ ಮೇಲೆ ಅವರೊಂದಿಗೂ ವಾಗ್ವಾದ ನಡೆಸಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ನಟ ರಕ್ಷ್, ಪತ್ನಿ ಅನುಷಾ, ಅಭಿಷೇಕ್, ರಂಜನ್, ಶರಣ್ಯ ಸೇರಿದಂತೆ ಏಳು ಮಂದಿ ವಿರುದ್ಧ ಎಫ್ ಐಆರ್ ದಾಖಲಾಗಿದೆ.