Publish Date: Fri, 28 Jan 2022 (10:10 IST)
Updated Date: Fri, 28 Jan 2022 (10:18 IST)
ಮುಂಬೈ: ದೇವರು ನನ್ನ ಬ್ರಾ ಸೈಝ್ ತೆಗೆದುಕೊಳ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿ ಶ್ವೇತಾ ತಿವಾರಿ ವಿರುದ್ಧ ಕೇಸ್ ದಾಖಲಾಗಿದೆ.
ಶ್ವೇತಾ ತಮ್ಮ ವೆಬ್ ಸರಣಿಯೊಂದರ ಪ್ರಚಾರಾರ್ಥ ಕಾರ್ಯಕ್ರಮವೊಂದರಲ್ಲಿ ದೇವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು. ಅವರ ಹೇಳಿಕೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಸ್ವತಃ ಮಧ‍್ಯಪ್ರದೇಶ ಗೃಹಸಚಿವರೇ ಪೊಲೀಸರಿಗೆ ಕ್ರಮ ಕೈಗೊಳ‍್ಳಲು ಸೂಚನೆ ನೀಡಿದ್ದರು.
ಅದರಂತೆ ಈಗ ಶ್ವೇತಾ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.