Publish Date: Wed, 19 Jan 2022 (10:00 IST)
Updated Date: Wed, 19 Jan 2022 (10:11 IST)
ನವದೆಹಲಿ: ಖಾಸಗಿ ವಾಹಿನಿಯ ರಿಯಾಲಿಟಿ ಶೋ ಒಂದರಲ್ಲಿ ಪ್ರಧಾನಿ ಮೋದಿ ಮತ್ತು ಅವರ ನೋಟು ನಿಷೇಧ ನಿರ್ಧಾರದ ಬಗ್ಗೆ ಅವಹೇಳನಕಾರಿಯಾಗಿ ಸ್ಕಿಟ್ ಮಾಡಿದ್ದರ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನೋಟಿಸ್ ನೀಡಿದೆ.
ತಮಿಳಿನ ಖಾಸಗಿ ವಾಹಿನಿಯ ಜ್ಯೂನಿಯರ್ ಸೂಪರ್ ಸ್ಟಾರ್ ಸೀಸನ್ 4 ಎಂಬ ಮಕ್ಕಳ ರಿಯಾಲಿಟಿ ಶೋ ಸ್ಕಿಟ್ ನಲ್ಲಿ ಕಪ್ಪು ಹಣವನ್ನು ನಿರ್ಮೂಲನೆ ಮಾಡುವ ಸಲುವಾಗಿ ಒಬ್ಬ ರಾಜನು ನೋಟ್ ಬ್ಯಾನ್ ಮಾಡುತ್ತಾನೆ. ಆದರೂ ಕಪ್ಪು ಹಣ ತೊಲಗುವುದೇ ಇಲ್ಲ ಎಂದು ಮಕ್ಕಳಿಂದ ಹೇಳಿಸಲಾಗಿದೆ.
ಇದನ್ನು ಆಕ್ಷೇಪಿಸಿ ಬಿಜೆಪಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ದೂರು ನೀಡಿತ್ತು. ಅದರಂತೆ ಸಚಿವಾಲಯ ವಿವರಣೆ ಕೋರಿ ಏಳು ದಿನಗಳೊಳಗಾಗಿ ಉತ್ತರ ನೀಡಬೇಕು ಎಂದು ನೋಟಿಸ್ ನೀಡಿದೆ.