Select Your Language

Notifications

webdunia
webdunia
webdunia
webdunia

ಮಗುವಿಗೆ ಮದ್ಯ ಕುಡಿಸಿದ್ದನ್ನು ಪ್ರಶ್ನಿಸಿದ ತಾಯಿಯ ವಿವಸ್ತ್ರಗೊಳಿಸಿದ ದುರುಳರು!

ಮದ್ಯ
ಬೆಂಗಳೂರು: ಮೂರು ವರ್ಷದ ಮುಗ್ಧ ಮಗುವಿಗೆ ಮದ್ಯ ಕುಡಿಸಿ ವಿಕೃತಿ ಮೆರೆದಿದ್ದನ್ನು ಪ್ರಶ್ನಿಸಿದ್ದಕ್ಕೆ ಗಂಡ-ಅತ್ತೆ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಈ ಸಂಬಂಧ 26 ವರ್ಷದ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಮಹಿಳೆಯ ಪತಿ, ಅತ್ತೆ, ಬಾವ, ಮಾವ ಹಾಗೂ ವಾರಗಿತ್ತಿ ವಿರುದ್ಧ ದೂರು ದಾಖಲಿಸಿದ್ದಾರೆ.

2018 ರಲ್ಲಿ ದಂಪತಿ ಮದುವೆಯಾಗಿದ್ದು, ಈಗ ಮೂರು ವರ್ಷದ ಮಗುವಿದೆ. ಪತಿಗೆ ಅತ್ತಿಗೆ ಜೊತೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಮನೆಯಲ್ಲಿಯೇ ಸ್ನೇಹಿತರನ್ನು ಕರೆತಂದು ಪಾರ್ಟಿ ಮಾಡುತ್ತಿದ್ದ. ಇತ್ತೀಚೆಗೆ ಪಾರ್ಟಿ ನಡುವೆ ಮಗುವಿಗೂ ಮದ್ಯ ಕುಡಿಸಿ ಹಿಂಸೆ ಮಾಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಾಡೂಟಕ್ಕೆ ಕರೆಯದ್ದಕ್ಕೆ ಕೋಪ: ಯುವಕನ ಕೊಲೆ