Publish Date: Tue, 18 Jan 2022 (09:40 IST)
Updated Date: Tue, 18 Jan 2022 (09:45 IST)
ಪಾಟ್ನಾ: ತಂದೆ ಜೊತೆ ಕ್ಷುಲ್ಲುಕ ವಿಚಾರಕ್ಕೆ ಜಗಳವಾಡಿದ ಅಪ್ರಾಪ್ತ ಯುವತಿ ಕೊನೆಗೆ ತಾನಿದ್ದ ಹಾಸ್ಟೆಲ್ ಕಟ್ಟಡದಿಂದಲೇ ಧುಮುಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಹಾರದಲ್ಲಿ ನಡೆದಿದೆ.
ನೀಟ್ ಬರೆಯಬೇಕೆಂದಿದ್ದ 12 ನೇ ತರಗತಿ ವಿದ್ಯಾರ್ಥಿನಿಗೆ ಈಗ ಕೊರೋನಾ ಕಾರಣದಿಂದ ಆನ್ ಲೈನ್ ತರಗತಿ ನಿಗದಿಯಾಗಿತ್ತು. ಹೀಗಾಗಿ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ತಂದೆ ಬಂದಿದ್ದರು. ಆಕೆಯ ಪುಸ್ತಕಗಳನ್ನೆಲ್ಲಾ ತುಂಬಿಕೊಳ್ಳುತ್ತಿದ್ದರು. ಆದರೆ ವಿದ್ಯಾರ್ಥಿನಿಗೆ ಮನೆಗೆ ಹೋಗಲು ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆಯಿತು.
ಕೊನೆಗೆ ಬಾಲಕಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ಬದುಕಿಸಲಾಗಲಿಲ್ಲ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.