Publish Date: Mon, 17 Jan 2022 (10:20 IST)
Updated Date: Mon, 17 Jan 2022 (10:30 IST)
ಬೆಂಗಳೂರು: ಹೆಂಡತಿ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ತನ್ನ ಪತಿಯನ್ನು ಕೊಲೆ ಮಾಡಿದ ರಹಸ್ಯ ಪತಿಯ ತಿಥಿ ಕಾರ್ಯದಲ್ಲಿ ಬಯಲಾಗಿದೆ.
ಗಂಡನಿಗೆ ಫಿಟ್ಸ್ ಬಂದು ಸಾವಾಗಿದೆ ಎಂದೇ ಎಲ್ಲರೂ ನಂಬಿದ್ದರು. ಆದರೆ 10 ನೇ ದಿನದ ಕಾರ್ಯದ ದಿನ ಮಗ ತನ್ನ ತಾತನ ಬಳಿ ಅಮ್ಮ ಮತ್ತು ಇನ್ನೊಬ್ಬ ವ್ಯಕ್ತಿ ತಂದೆಗೆ ಹೊಡೆದಿದ್ದರಿಂದ ಆತ ಸಾವನ್ನಪ್ಪಿದ್ದಾಗಿ ಬಾಯ್ಬಿಟ್ಟಿದ್ದ. ಅಲ್ಲದೆ, ಹೊರಗೆ ಯಾರಿಗಾದರೂ ಹೇಳಿದರೂ ನಿನಗೂ ಹೊಡೆಯುವುದಾಗಿ ಬೆದರಿಕೆ ಹಾಕಿದ್ದರು ಎಂದು ಹೇಳಿದ್ದ.
ಆಗಲೇ ಮನೆಯವರಿಗೆ ನಿಜಾಂಶ ಗೊತ್ತಾಗುತ್ತದೆ. ತಕ್ಷಣವೇ ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿಗಳಿಬ್ಬರನ್ನೂ ಬಂಧಿಸಲಾಗಿದೆ.