Select Your Language

Notifications

webdunia
webdunia
webdunia
webdunia

ಬೇರೆಡೆ ಗಮನ ಸೆಳೆದು ಮೊಬೈಲ್ ಕಳ್ಳತನ

ಬೇರೆಡೆ ಗಮನ ಸೆಳೆದು ಮೊಬೈಲ್ ಕಳ್ಳತನ
ನವದೆಹಲಿ , ಸೋಮವಾರ, 17 ಜನವರಿ 2022 (09:40 IST)
ನವದೆಹಲಿ:  ನಡೆದಾಡುತ್ತಿದ್ದ ವ್ಯಕ್ತಿಯ ಗಮನ ಬೇರೆಡೆ ಸೆಳೆದು ಆತನ ಮೊಬೈಲ್ ಕಸಿದುಕೊಂಡ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ.

ಈ ಆರೋಪಿಗಳು ಇದಕ್ಕೂ ಮೊದಲೂ ಇಂತಹದ್ದೇ ಪ್ರಕರಣದಲ್ಲಿ ಭಾಗಿಯಾಗಿದ್ದರು. ಮೊಬೈಲ್ ಕಳೆದುಕೊಂಡ ವ್ಯಕ್ತಿ ಮತ್ತು ಸ್ಥಳೀಯರ ಹೇಳಿಕೆಗಳನ್ನು ಆಧರಿಸಿ ಪೊಲೀಸರ ತಂಡ ಕಾರ್ಯಪ್ರವೃತ್ತವಾಗಿದೆ.

ಅದರಂತೆ ಮೊಬೈಲ್ ಸಮೇತ ಮೊದಲು ಇಬ್ಬರನ್ನು ಬಂಧಿಸಲಾಗಿದ್ದು, ಬಳಿಕ ಇನ್ನೊಬ್ಬ ಸಹಚರನನ್ನೂ ಬಂಧಿಸಲಾಗಿದೆ. ಇದಕ್ಕೂ ಮೊದಲು ಆರೋಪಿಗಳು ದರೋಡೆ ಮಾಡಿದ್ದ ಮೊಬೈಲ್ ಗಳನ್ನೂ ಈ ವೇಳೆ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋವಿಡ್‌ನ ಮತ್ತೊಂದು ರೂಪಾಂತರಿ ಪತ್ತೆ!