Publish Date: Sun, 16 Jan 2022 (10:44 IST)
Updated Date: Sun, 16 Jan 2022 (10:09 IST)
ಸಿಂಗಾಪುರ: ತನ್ನ ಪತ್ನಿ ಇನ್ನೊಬ್ಬನ ಜೊತೆ ಮಲಗಿದರೆ ಹೇಗಿರುತ್ತದೆ ಎಂಬ ಕೆಟ್ಟ ಕುತೂಹಲದಿಂದ ಪತಿ ಮಹಾಶಯ ತನ್ನ ಸ್ನೇಹಿತನಿಗೇ ರೇಪ್ ಮಾಡಲು ಹೇಳುತ್ತಾನೆ! ಮುಂದೇನಾಯ್ತು? ಈ ಸುದ್ದಿ ಓದಿ.
48 ವರ್ಷದ ಪತಿಗೆ ತನ್ನ ಪತ್ನಿ ಬೇರೊಬ್ಬನ ಜೊತೆ ಲೈಂಗಿಕ ಕ್ರಿಯೆ ನಡೆಸುವುದನ್ನು ನೋಡುವ ಕೆಟ್ಟ ಕುತೂಹಲವಿತ್ತು. ಅದಕ್ಕಾಗಿ ತನ್ನ ಸ್ನೇಹಿತನ ಸಹಾಯ ಪಡೆದಿದ್ದ. ಪತ್ನಿಗೆ ಮದ್ಯದಲ್ಲಿ ಮತ್ತು ಬರಿಸುವ ಔಷಧ ಕುಡಿಸಿ ಬೆಡ್ ರೂಂನಲ್ಲಿ ಬಿಟ್ಟು, ಅಲ್ಲಿಗೆ ತನ್ನ ಸ್ನೇಹಿತನನ್ನು ಕಳುಹಿಸಿದ್ದ.
ಆದರೆ ಪರ ಪುರುಷ ಬಂದಾಗ ಪತ್ನಿಗೆ ಗೊತ್ತಾಗಿ ಆಕೆ ಜೋರಾಗಿ ಕಿರುಚಿಕೊಂಡಿದ್ದಾಳೆ. ಇದರಿಂದ ಗಾಬರಿಗೊಂಡು ಆ ವ್ಯಕ್ತಿ ಓಡಿ ಹೋಗಿದ್ದಾನೆ. ಬಳಿಕ ಪತ್ನಿ ತನ್ನ ಪತಿ ಮತ್ತು ಸ್ನೇಹಿತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಇಬ್ಬರಿಗೂ ಮೂರು ವರ್ಷ ಜೈಲು ಶಿಕ್ಷೆಯಾಗಿದೆ. ಈ ದಂಪತಿ ಮದುವೆಯಾಗಿ 23 ವರ್ಷಗಳಾಗಿದ್ದು, ಈಗ ಮೂವರು ಮಕ್ಕಳೂ ಇದ್ದಾರಂತೆ. ಇಂತಹಾ ಸುಖ ಸಂಸಾರದಲ್ಲಿ ಕೆಟ್ಟ ಆಸೆಯಿಂದ ಗಂಡ ಜೈಲು ಪಾಲಾಗಿದ್ದಾನೆ.