Publish Date: Mon, 17 Jan 2022 (09:30 IST)
Updated Date: Mon, 17 Jan 2022 (09:37 IST)
ರಾಂಚಿ: ಮದ್ಯ ಖರೀದಿಸಲು ಹಣ ಕೊಡಲಿಲ್ಲವೆಂಬ ಕಾರಣಕ್ಕೆ ಗರ್ಭಿಣಿ ಪತ್ನಿಯನ್ನು ಪತಿ ಕತ್ತು ಹಿಸುಕಿ ಕೊಂದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.
ಕಳೆದ ವರ್ಷವಷ್ಟೇ ದಂಪತಿಯ ವಿವಾಹವಾಗಿತ್ತು. ಆದರೆ ಪತಿ ಮದ್ಯ ವ್ಯಸನಿಯಾಗಿದ್ದ. ಇದರಿಂದಾಗಿ ಪತ್ನಿಯ ಮೇಲೆ ಕಂಠಪೂರ್ತಿ ಕುಡಿದು ಹಲ್ಲೆ ಮಾಡುತ್ತಿದ್ದ.
ಆದರೆ ಈ ಬಾರಿ ಪತ್ನಿ ಕುಡಿಯಲು ಹಣ ಕೊಡದೇ ಇದ್ದಾಗ ಆಕ್ರೋಶಗೊಂಡ ಆತ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಪತ್ನಿ ಏಳು ತಿಂಗಳ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.