Publish Date: Tue, 18 Jan 2022 (09:10 IST)
Updated Date: Tue, 18 Jan 2022 (09:14 IST)
ಭೋಪಾಲ್: ಮಾನ ಕಾಪಾಡಬೇಕಾದ ಪತಿಯೇ ತನ್ನ ಪತ್ನಿಯನ್ನು ಸ್ನೇಹಿತರಿಗೊಬ್ಬಿಸಿ ಚಿತ್ರ ಹಿಂಸೆ ನೀಡಿದ ಘಟನೆ ನಡೆದಿದೆ.
ಛತ್ತೀಸ್ ಘಡ ಮೂಲದ ಮಹಿಳೆ ಇಂಧೋರ್ ಮೂಲದ ವ್ಯಕ್ತಿಯನ್ನು ವೈವಾಹಿಕ ಅಂಕಣದಲ್ಲಿ ಪರಿಚಯವಾಗಿ ಮದುವೆಯಾಗಿದ್ದಳು. ಆದರೆ ಆತನಿಗೆ ಈಗಾಗಲೇ ಬೇರೊಂದು ಮದುವೆಯಾಗಿರುವ ವಿಚಾರ ಗೊತ್ತಾಗಿ ತವರಿಗೆ ಬಂದಿದ್ದಾಳೆ. ಆದರೆ ಅಲ್ಲಿಯೂ ಆತ ಹಿಂಬಾಲಿಸಿಕೊಂಡು ಬಂದಿದ್ದಾನೆ.
ಈ ನಡುವೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದ ಕಳೆದ ವರ್ಷ ಅಕ್ಟೋಬರ್ ವೇಳೆ ತನ್ನ ಮೇಲೆ ಪತಿ ಹಾಗೂ ಆತನ ಸ್ನೇಹಿತರು ಅತ್ಯಾಚಾರ ನಡೆಸಿದ್ದಾರೆ. ಪತಿಯೇ ಸ್ನೇಹಿತರಿಗೆ ತನ್ನನ್ನು ಒಪ್ಪಿಸಿದ್ದು, ಅವರು ಖಾಸಗಿ ಅಂಗಾಂಗಗಳನ್ನು ಸಿಗರೇಟಿನಿಂದ ಸುಟ್ಟಿದ್ದಾರೆಂದು ಆರೋಪಿಸಿದ್ದಾಳೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.