Select Your Language

Notifications

webdunia
webdunia
webdunia
webdunia

ಮದುವೆಯಾದ ಮೇಲೂ ಮಾಜಿ ಲವ್ವರ್ ಮೇಲಿನ ಪ್ರೀತಿಗೆ ಮಹಿಳೆ ಮಾಡಿದ್ದೇನು?!

ಮದುವೆಯಾದ ಮೇಲೂ ಮಾಜಿ ಲವ್ವರ್ ಮೇಲಿನ ಪ್ರೀತಿಗೆ ಮಹಿಳೆ ಮಾಡಿದ್ದೇನು?!
ಬೆಂಗಳೂರು , ಮಂಗಳವಾರ, 18 ಜನವರಿ 2022 (09:20 IST)
ಬೆಂಗಳೂರು: ಮದುವೆಯಾದ ಮಹಿಳೆಯೊಬ್ಬಳು ತನ್ನ ಹಳೇ ಪ್ರೀತಿಯನ್ನು ಮರೆಯಲಾಗದೇ ಪ್ರಿಯಕರನ ಜೊತೆ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಮದುವೆಯಾದ ಬಳಿಕವೂ ಪ್ರಿಯತಮನ ಜೊತೆ ಮಹಿಳೆಗೆ ಸಂಪರ್ಕವಿತ್ತು. ಇದೇ ಕಾರಣಕ್ಕೆ ಈ ಜೋಡಿ ಓಡಿ ಹೋಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಗಂಡ-ಹೆಂಡತಿ ಎಂದು ಸುಳ್ಳು ಹೇಳಿ ಬಾಡಿಗೆ ಮನೆ ಪಡೆದಿದ್ದರು.

ಅದೇ ಬಾಡಿಗೆ ಮನೆಯಲ್ಲಿ ಇಬ್ಬರೂ ನೇಣಿಗೆ ಶರಣಾಗಿದ್ದಾರೆ. ಕೊಳೆತ ವಾಸನೆ ಬರುತ್ತಿದ್ದ ಕಾರಣಕ್ಕೆ ನೆರೆಹೊರೆಯವರು ಸ್ಥಳಕ್ಕೆ ಹೋಗಿ ನೋಡಿದಾಗ ವಿಚಾರ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ನೇಹಿತರಿಗೆ ಪತ್ನಿಯನ್ನು ಒಪ್ಪಿಸಿದ ಪತಿ