Publish Date: Thu, 27 Jan 2022 (17:02 IST)
Updated Date: Thu, 27 Jan 2022 (17:04 IST)
ಭೋಪಾಲ್: ಹಿಂದಿಯ ಖ್ಯಾತ ಕಿರುತೆರೆ ನಟಿ ಶ್ವೇತಾ ತಿವಾರಿ ದೇವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಈಗ ವಿವಾದಕ್ಕೆ ಗುರಿಯಾಗಿದ್ದಾರೆ.
ತಮ್ಮ ಮುಂಬರುವ ವೆಬ್ ಸರಣಿಯೊಂದರ ಪ್ರಚಾರಾರ್ಥ ನಡೆದ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಸಂದರ್ಶಕರ ಪ್ರಶ್ನೆಗೆ ಉತ್ತರಿಸುವಾಗ ಶ್ವೇತಾ ದೇವರು ನನ್ನ ಬ್ರಾ ಸೈಝ್ ತೆಗೆದುಕೊಳ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರು ದೇವರನ್ನು ಅವಹೇಳನ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಗಮನಿಸಿರುವ ಮಧ‍್ಯಪ್ರದೇಶ ಗೃಹಸಚಿವರು ಪೊಲೀಸರಿಗೆ ತನಿಖೆ ನಡೆಸಿ ಕ್ರಮ ಕೈಗೊಳ‍್ಳಲು ಸೂಚಿಸಿದ್ದಾರೆ.