Publish Date: Thu, 27 Jan 2022 (10:30 IST)
Updated Date: Thu, 27 Jan 2022 (10:38 IST)
ಹೈದರಾಬಾದ್: ಮುರಿದು ಬಿದ್ದಿರುವ ಮಗಳು ಐಶ್ವರ್ಯಾ ಸಂಸಾರ ಜೀವನ ಸೂಪರ್ ಸ್ಟಾರ್ ರಜನೀಕಾಂತ್ ಗೆ ಚಿಂತೆಯ ವಿಷಯವಾಗಿದೆ. ಹೀಗಾಗಿ ಅವರೀಗ ಮಗಳ ದಾಂಪತ್ಯ ಜೀವನ ಸರಿಮಾಡಲು ಹೊರಟಿದ್ದಾರಂತೆ.
ಐಶ್ವರ್ಯಾ-ಧನುಷ್ ತಮ್ಮ 18 ವರ್ಷಗಳ ದಾಂಪತ್ಯ ಜೀವನಕ್ಕೆ ಇತ್ತೀಚೆಗೆ ಅಂತ್ಯ ಹಾಡುತ್ತಿರುವುದಾಗಿ ಘೋಷಿಸಿದ್ದರು. ಇದು ಅಭಿಮಾನಿಗಳಿಗೂ ಶಾಕ್ ತಂದಿತ್ತು.
ಸದ್ಯಕ್ಕೆ ಇಬ್ಬರೂ ಹೈದರಾಬಾದ್ ನಲ್ಲಿದ್ದಾರೆ. ಆದರೆ ಕೌಟುಂಬಿಕ ಕಲಹದಿಂದಾಗಿ ಇಬ್ಬರು ಮಕ್ಕಳ ಪೋಷಕರಾಗಿರುವ ಇವರು ಬೇರಾಗಲು ನಿರ್ಧರಿಸಿದ್ದಾರೆ. ರಜನೀಕಾಂತ್ ಈಗ ಮಗಳು ಮತ್ತು ಅಳಿಯನ ಜೊತೆ ಮಾತುಕತೆ ನಡೆಸುತ್ತಿದ್ದು, ಇಬ್ಬರನ್ನೂ ಒಂದು ಮಾಡಲು ಸಕಲ ಪ್ರಯತ್ನ ಮಾಡುತ್ತಿದ್ದಾರಂತೆ.