Select Your Language

Notifications

webdunia
webdunia
webdunia
webdunia

ನಟಿ ಐಶ್ವರ್ಯಾ ರೈಗೆ ಇಡಿ ಸಂಕಷ್ಟ: ವಿಚಾರಣೆಗೆ ಹಾಜರಾಗಲು ಸೂಚನೆ

ನಟಿ ಐಶ್ವರ್ಯಾ ರೈಗೆ ಇಡಿ ಸಂಕಷ್ಟ: ವಿಚಾರಣೆಗೆ ಹಾಜರಾಗಲು ಸೂಚನೆ
ಮುಂಬೈ , ಸೋಮವಾರ, 20 ಡಿಸೆಂಬರ್ 2021 (11:20 IST)
ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈಗೆ ಪನಾಮಾ ಪೇಪರ್ಸ್ ಕೇಸ್ ಸುತ್ತಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿದೆ.

ತೆರಿಗೆ ವಂಚನೆಗೆ ಸಂಬಂಧಿಸಿದ ಪನಾಮಾ ಪೇಪರ್ಸ್ ಹಗರಣದಲ್ಲಿ ಹಲವು ಖ್ಯಾತ ನಾಮರ ಹೆಸರು ಕೇಳಿಬಂದಿದ್ದು, ಈ ಬಗ್ಗೆ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ತಂಡ ಈಗ ಐಶ್ವರ್ಯಾ ರೈಗೆ ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

ಈ ಪ್ರಕರಣದಲ್ಲಿ ಐಶ್ವರ್ಯಾ ಮಾವ, ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಹೆಸರೂ ಕೂಡಾ ಕೇಳಿಬಂದಿತ್ತು. ತೆರಿಗೆ ವಂಚಿಸಿ ರಹಸ್ಯವಾಗಿ ವಿದೇಶಗಳಲ್ಲಿ ಹಣ ಹೂಡಿಕೆ ಮಾಡಿರುವ ಹಲವು ಖ್ಯಾತ ನಾಮರ ಹೆಸರುಗಳು ಈ ಪ್ರಕರಣದಲ್ಲಿ ಕೇಳಿಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಟಾರ್ ಡಂ ಬಿಟ್ಟು ಚಕ್ಕಳಮಕ್ಕಳ ಹಾಕಿ ಕುಳಿತೇ ಬಿಟ್ರು ರಚಿತಾ ರಾಂ