Publish Date: Tue, 30 Nov 2021 (16:46 IST)
Updated Date: Tue, 30 Nov 2021 (16:47 IST)
ಮುಂಬೈ: ಸಾಮಾನ್ಯ ಜನರ ಫೋನ್ ಕಳ್ಳತನವಾಗುವ ಪ್ರಕರಣಗಳನ್ನು ಎಷ್ಟೋ ಕೇಳಿದ್ದೇವೆ. ಆದರೆ ಇಲ್ಲಿ ಬಾಲಿವುಡ್ ನಟಿಯೊಬ್ಬರು ಇದೇ ಪರಿಸ್ಥಿತಿ ಎದುರಿಸಿದ್ದಾರೆ.
ಕಬೀರ್ ಖಾನ್ ಖ್ಯಾತಿಯ ಬಾಲಿವುಡ್ ನಟಿ ನಿಖಿತಾ ದತ್ತಾರ ಫೋನ್ ನ್ನು ಬೈಕ್ ನಲ್ಲಿ ಬಂದ ಕಳ್ಳರು ಎಗರಿಸಿಕೊಂಡು ಹೋದ ಘಟನೆ ನಡೆದಿದೆ.
ಈ ವಿಚಾರವನ್ನು ಸ್ವತಃ ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇಬ್ಬರು ತನನ್ನು ಫಾಲೋ ಮಾಡುತ್ತಿದ್ದರು. ಅವರಲ್ಲಿ ಒಬ್ಬಾತ ತಲೆ ಮೇಲೆ ಮೆತ್ತಗೆ ಹೊಡೆದು ಬೇರೆ ಕಡೆ ಗಮನ ಸೆಳೆದು ನನ್ನ ಕೈಲಿದ್ದ ಮೊಬೈಲ್ ಫೋನ್ ಎಳೆದೊಯ್ದು ಬೈಕ್ ನಲ್ಲಿ ಪರಾರಿಯಾಗಿದ್ದಾರೆ ಎಂದು ನಿಖಿತಾ ಹೇಳಿದ್ದಾರೆ. ಬಾಂದ್ರಾದಲ್ಲಿ ಈ ಘಟನೆ ನಡೆದಿದ್ದು ಪೊಲೀಸರಿಗೆ ದೂರು ನೀಡಿರುವುದಾಗಿ ನಿಖಿತಾ ಹೇಳಿದ್ದಾರೆ.