Select Your Language

Notifications

webdunia
webdunia
webdunia
Sunday, 13 April 2025
webdunia

ಪಟಾಕಿ ಹೊಡೆದ ಅಭಿಮಾನಿಗಳಿಗೆ ಸಲ್ಮಾನ್ ಖಾನ್ ಕಿವಿ ಮಾತು

ಸಲ್ಮಾನ್ ಖಾನ್
ಮುಂಬೈ , ಭಾನುವಾರ, 28 ನವೆಂಬರ್ 2021 (09:26 IST)
ಮುಂಬೈ: ಥಿಯೇಟರ್ ನಲ್ಲಿ ತಮ್ಮ ‘ಅಂತಿಮ್’ ಸಿನಿಮಾ ಪ್ರದರ್ಶನ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಅಭಿಮಾನಿಗಳಿಗೆ ಸಲ್ಮಾನ್ ಖಾನ್ ಕಿವಿ ಮಾತು ಹೇಳಿದ್ದಾರೆ.

ಅಂತಿಮ್ ಸಿನಿಮಾ ಪ್ರದರ್ಶನ ವೇಳೆ ತೆರೆ ಮುಂದೆ ನಿಂತು ಪಟಾಕಿ ಸಿಡಿಸಿದ ಅಭಿಮಾನಿಗಳ ವಿಡಿಯೋ ವೀಕ್ಷಿಸಿದ ಸಲ್ಮಾನ್, ಥಿಯೇಟರ್ ಒಳಗೆ ಯಾರೂ ಪಟಾಕಿ ಕೊಂಡೊಯ್ಯಬೇಡಿ. ಇದರಿಂದ ಅಪಾಯಗಳಾಗಬಹುದು ಎಂದು ಕಿವಿ ಮಾತು ಹೇಳಿದ್ದಾರೆ.

‘ಥಿಯೇಟರ್ ಒಳಗೆ ಪಟಾಕಿ ಸಿಡಿಸುವುದರಿಂದ ನಿಮ್ಮ ಮತ್ತು ಸುತ್ತಲಿನವರ ಪ್ರಾಣಕ್ಕೆ ತೊಂದರೆಯಾಗಬಹುದು. ಥಿಯೇಟರ್ ಮಾಲಿಕರೂ ಒಳಗೆ ಪಟಾಕಿ ಸಿಡಿಸಲು ಅನುಮತಿ ನೀಡಬಾರದು. ಭದ್ರತೆಯ ಕಾರಣದಿಂದ ಇಂತಹ ಕೆಲಸ ಮಾಡಲು ಹೊರಟವರಿಗೆ ಪ್ರವೇಶ ನಿರಾಕರಿಸಬೇಕು. ಸಿನಿಮಾ ಎಂಜಾಯ್ ಮಾಡಿ. ಆದರೆ ಇಂತಹದ್ದಕ್ಕೆ ಅವಕಾಶ ನೀಡಬೇಡಿ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ರಾಜ್ ಕುಮಾರ್ ಹೆಸರಲ್ಲಿ 70 ಕ್ಕೂ ಹೆಚ್ಚು ರಸ್ತೆಗಳು