ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದೆ. ಡಿಸೆಂಬರ್ 3 ರಂದು ಚಿತ್ರ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ.
									
			
			 
 			
 
 			
			                     
							
							
			        							
								
																	ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ದಾಖಲೆಯ ವ್ಯೂ ಪಡೆದಿತ್ತು. ಹೀಗಾಗಿ ಈ ಸಿನಿಮಾ ಬಾಲಿವುಡ್ ಮಂದಿಯ ಗಮನವನ್ನೂ ಸೆಳೆದಿದೆ.
									
										
								
																	ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಗೆ ಸಿದ್ಧವಾಗಿದ್ದ ಮದಗಜನಿಗೆ ಈಗ ಹಿಂದಿಯಲ್ಲೂ ಭಾರೀ ಬೇಡಿಕೆ ಬಂದಿದ್ದು, ಬರೋಬ್ಬರಿ 8 ಕೋಟಿ ರೂ.ಗೆ ಹಿಂದಿಗೆ ಡಬ್ಬಿಂಗ್ ರೈಟ್ಸ್ ಮಾರಾಟವಾಗಿದೆ. ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ ಸಿನಿಮಾ ಇದಾಗಿದ್ದು, ಸಿನಿಮಾ ಮೇಕಿಂಗ್, ಅದ್ಧೂರಿತನದಿಂದ ಎಲ್ಲರ ಗಮನ ಸೆಳೆಯುತ್ತಿದೆ.