ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಖತ್ ಸಿನಿಮಾ ಇಂದಿನಿಂದ ರಾಜ್ಯಾದ್ಯಂತ ತೆರೆ ಕಾಣಲಿದೆ.
ಈ ಸಿನಿಮಾದಲ್ಲಿ ಗಣೇಶ್ ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಭಿನಯಿಸಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ಈ ಸಿನಿಮಾ ಟೀಸರ್, ಟ್ರೈಲರ್ ಮೂಲಕ ಈಗಾಗಲೇ ಜನರ ಗಮನ ಸೆಳೆದಿದೆ.
ಪಕ್ಕಾ ಫ್ಯಾಮಿಲಿ ಎಂಟರ್ ಟೈನರ್ ಇದಾಗಿರಲಿದ್ದು, ದುಡ್ಡು ಕೊಟ್ಟು ನೋಡುವ ಪ್ರೇಕ್ಷಕರಿಗೆ ಮೋಸವಾಗದು ಎಂಬ ಭರವಸೆ ಚಿತ್ರತಂಡ ನೀಡಿದೆ.