ಮುಂಬೈ: ಜೈಲಿನಿಂದ ಬಂದ ಮೇಲೆ ಮಂಕಾಗಿರುವ ಪುತ್ರ ಆರ್ಯನ್ ನನ್ನು ಮತ್ತೆ ಮೊದಲಿನ ಸ್ಥಿತಿಗೆ ತರಲು ಶಾರುಖ್ ಖಾನ್ ದಂಪತಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ.
ಇದೀಗ ಶಾರುಖ್ ಖಾನ್ ತಮ್ಮ ಮಗನ ಮಾನಸಿಕ ಸ್ಥಿತಿ ಸುಧಾರಣೆಗೆ ವಿಶೇಷ ಕೋಚ್ ಅನ್ನು ನೇಮಿಸಿದ್ದಾರಂತೆ. ಆರ್ಯನ್ ಗೆ ಮಾನಸಿಕ ಸ್ಥೈರ್ಯ ತುಂಬಲೆಂದು ಕೋಚ್ ಆಗಿ ಅರ್ಫೀನ್ ಖಾನ್ ಎಂಬವರನ್ನು ಶಾರುಖ್ ದಂಪತಿ ನೇಮಿಸಿದ್ದಾರೆ.
ಅರ್ಫೀನ್ ಖಾನ್ ಇದಕ್ಕೂ ಮೊದಲು ನಟ ಹೃತಿಕ್ ರೋಷನ್ ಗೆ ಲೈಫ್ ಕೋಚ್ ಆಗಿ ಕೆಲಸ ಮಾಡಿದ್ದರು. ಹೀಗಾಗಿ ಬಾಲಿವುಡ್ ನಲ್ಲಿ ಅರ್ಫೀನ್ ಚಿರಪರಿಚಿತ. ಇದೀಗ ಆರ್ಯನ್ ಮನಸ್ಥಿತಿ ಸುಧಾರಣೆಗೆ ಅರ್ಫೀನ್ ಕೆಲಸ ಮಾಡಲಿದ್ದಾರಂತೆ.