ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿದ್ದಾರೆ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಇನ್ನೂ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ತಮ್ಮ ಮೆಚ್ಚಿನ ನಟನ ಮೇಲಿನ ಪ್ರೀತಿಯನ್ನು ತಮ್ಮದೇ ರೀತಿಯಲ್ಲಿ ತೋರಿಸಿಕೊಳ್ಳುತ್ತಿದ್ದಾರೆ.
ಇದೀಗ ಅಭಿಮಾನಿಯೊಬ್ಬರು ಶಬರಿಮಲೆ ಯಾತ್ರೆ ಸಂದರ್ಭದಲ್ಲಿ ಇರುಮುಡಿ ಜೊತೆ ಅಪ್ಪು ಫೋಟೋವನ್ನೂ ಕೊಂಡೊಯ್ದು ಅಯ್ಯಪ್ಪನ ದರ್ಶನ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈತನ ಅಭಿಮಾನಕ್ಕೆ ಸ್ವತಃ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡಾ ಮಾರುಹೋಗಿದ್ದಾರೆ. ಅಪ್ಪು ಹೋಗಿ ಇಷ್ಟು ದಿನವಾದರೂ ಅವರು ಈಗಲೂ ನಮ್ಮೊಂದಿಗಿದ್ದಾರೆ ಎಂದು ಅಭಿಮಾನಿಗಳು ಈ ಮೂಲಕ ತೋರಿಸಿಕೊಡುತ್ತಲೇ ಇದ್ದಾರೆ.