Publish Date: Fri, 26 Nov 2021 (17:04 IST)
Updated Date: Fri, 26 Nov 2021 (17:14 IST)
ಬೆಂಗಳೂರು: ಆರ್ ಆರ್ ಆರ್ ಸಿನಿಮಾದ ಅಡಿಯೋ ಲಾಂಚ್ ಗೆ ಬೆಂಗಳೂರಿಗೆ ಬಂದಿದ್ದ ನಿರ್ದೇಶಕ ರಾಜಮೌಳಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಇತ್ತೀಚೆಗೆ ಅಗಲಿದ ನಟ ಪುನೀತ್ ನಿವಾಸಕ್ಕೆ ಭೇಟಿ ನೀಡಿದ ರಾಜಮೌಳಿ ಪುನೀತ್ ಪತ್ನಿ ಅಶ್ವಿನಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಮೌಳಿ ಪುನೀತ್ ರನ್ನು ನಾನು ಎರಡೇ ಬಾರಿ ಭೇಟಿಯಾಗಿದ್ದು. ಆದರೂ ಅವರು ಕುಟುಂಬದವರ ರೀತಿ ಟ್ರೀಟ್ ಮಾಡಿದರು. ಎಷ್ಟೆಲ್ಲಾ ಜನಕ್ಕೆ ಸಹಾಯ ಮಾಡುತ್ತಿದ್ದರು ಎಂದು ನಿಧನದ ನಂತರ ಗೊತ್ತಾಯಿತು ಎಂದಿದ್ದಾರೆ. ಈ ವೇಳೆ ರಾಜಮೌಳಿ ಪತ್ನಿ ರಮಾ ಕೂಡಾ ಜೊತೆಗಿದ್ದರು.
ಇನ್ನು, ತ್ರಿಬಲ್ ಆರ್ ಸಿನಿಮಾ ಕನ್ನಡದಲ್ಲೂ ಬಿಡುಗಡೆಯಾಗಲಿದ್ದು, ಅದಕ್ಕೂ ಮೊದಲು ಇಲ್ಲಿ ಹಾಡೊಂದನ್ನು ಲಾಂಚ್ ಮಾಡಲಾಗಿದೆ.