Publish Date: Fri, 26 Nov 2021 (12:28 IST)
Updated Date: Fri, 26 Nov 2021 (12:59 IST)
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ನಿಕ್ ಜೋನಾಸ್ ಅವರಿಂದ ವಿಚ್ಛೇದನ ಪಡೆದಿದ್ದಾರೆ ಎಂದು ಗಾಸಿಪ್ ಹರಡಿತ್ತು. ಇದು ಸುಳ್ಳು ಎಂದು ಪ್ರಿಯಾಂಕಾ ತಾಯಿ ಕೂಡ ಹೇಳಿದ್ದರು.
ಆದರೆ ಗಂಡನನ್ನು ಅಪ್ಪಿರುವ ಫೋಟೋ ಹಂಚಿಕೊಂಡು ಪ್ರಿಯಾಂಕಾ ತಾನು ನಿಕ್ ಜೊತೆ ಚೆನ್ನಾಗಿರುವೆ ಎಂದು ಹೇಳಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಪತಿ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿ ಅವರ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. "ಸ್ನೇಹಿತರು, ಕುಟುಂಬಕ್ಕೆ ಧನ್ಯವಾದಗಳು" ಎಂದು ಪ್ರಿಯಾಂಕಾ ಹೇಳಿದ್ದಾರೆ.
ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಾಸ್ ಸಹೋದರರ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಮಾತನಾಡಿದ್ದರು. ಅಷ್ಟೇ ಅಲ್ಲದೆ ಮನೆಯಲ್ಲಿ ನಿಕ್ ಸಹೋದರರಿಗೆ ಮಕ್ಕಳಿದ್ದಾರೆ, ನಮಗೆ ಇನ್ನೂ ಇಲ್ಲ ಎಂದು ಹೇಳಿದ್ದರು. "ನನಗೂ ನಿಕ್ಗೋ 10 ವರ್ಷಗಳ ವಯಸ್ಸಿನ ಅಂತರವಿದೆ. 90ರ ದಶಕದ ಸಂಪ್ರದಾಯವನ್ನು ನಾನೇ ನಿಕ್ಗೆ ಹೇಳುವೆ. ಟಿಕ್ ಟಾಕ್ ಹೇಗೆ ಬಳಸೋದು ಅಂತ ನನಗೆ ನಿಕ್ ತೋರಿಸಿದ, ನಾನು ಅವನಿಗೆ ಯಶಸ್ವಿ ನಟನಾ ವೃತ್ತಿ ಹೇಗಿರುತ್ತದೆ ಎಂದು ತೋರಿಸಿದೆ" ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದರು. ಈ ವಿಡಿಯೋವನ್ನು ನಟಿ ಅನುಷ್ಕಾ ಶರ್ಮಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಪ್ರಿಯಾಂಕಾರನ್ನು ಹೊಗಳಿದ್ದಾರೆ.
ಮುಂಬೈಯಲ್ಲಿರುವ ಆಸ್ತಿಗಳನ್ನು ಪ್ರಿಯಾಂಕಾ ಮಾರಾಟ ಮಾಡುತ್ತಿದ್ದಾರೆ. ಸಂಪೂರ್ಣವಾಗಿ ಹಾಲಿವುಡ್ನಲ್ಲಿಯೇ ಪ್ರಿಯಾಂಕಾ ನೆಲೆ ನಿಲ್ಲುವ ಆಲೋಚನೆ ಮಾಡಿದ್ದಾರಾ ಎಂಬ ಪ್ರಶ್ನೆ ಎದ್ದಿತ್ತು. ಪ್ರಿಯಾಂಕಾ ಚೋಪ್ರಾ ಮುಂಬೈನಲ್ಲಿ ಅಂಧೇರಿ ವೆಸ್ಟ್ನ ರಾಜ್ ಕ್ಲಾಸಿಕ್ ವರ್ಸೊವಾದಲ್ಲಿರುವ ಎರಡು ಅಪಾರ್ಟ್ಮೆಂಟ್ಗಳನ್ನು 7 ಕೋಟಿ ರೂ.ಗೆ, 7ನೇ ಫ್ಲೋರ್ನಲ್ಲಿದ್ದ ಅವರ ಫ್ಲಾಟ್ನ್ನು 3 ಕೋಟಿ ರೂಪಾಯಿಗೆ ಮಾರಿದ್ದರು. ಇನ್ನೊಂದು ಫ್ಲಾಟ್ನ್ನು 4 ಕೋಟಿ ರೂಪಾಯಿಗೆ ಮಾರಿದ್ದರು.