ಮುಂಬೈ: ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ.
ಬಹಿರಂಗವಾಗಿ ಈ ಜೋಡಿ ಈ ವಿಚಾರವನ್ನು ಹೇಳದೇ ಇದ್ದರೂ ಸೋಷಿಯಲ್ ಮೀಡಿಯಾ ಮೂಲಕ ಇಬ್ಬರೂ ಪ್ರೇಮಿಗಳು ಎನ್ನುವುದು ಹಲವು ಬಾರಿ ಸಾಬೀತಾಗಿದೆ.
ಇದೀಗ ರಾಹುಲ್ ಅಥಿಯಾ ಮತ್ತು ಕುಟುಂಬದವರ ಜೊತೆ ಸಾರ್ವಜನಿಕವಾಗಿ ಪೋಸ್ ನೀಡಿ ಸುದ್ದಿಯಾಗಿದ್ದಾರೆ. ಅಥಿಯಾ ಸಹೋದರ ಅಹಾನ್ ಶೆಟ್ಟಿ ಚೊಚ್ಚಲ ಅಭಿನಯದ ತಡಪ್ ಸಿನಿಮಾ ಪ್ರೀಮಿಯರ್ ಶೋನಲ್ಲಿ ರಾಹುಲ್, ಸುನಿಲ್ ಶೆಟ್ಟಿ ಕುಟುಂಬದವರೊಂದಿಗೆ ಪೋಸ್ ನೀಡಿದ್ದಾರೆ. ಈ ಸಿನಿಮಾ ನಾಳೆ ತೆರೆಗೆ ಬರಲಿದೆ.