ಮುಂಬೈ: ಕಿಂಗ್ಸ್ ಪಂಜಾಬ್ ನಾಯಕರಾಗಿದ್ದ ಕೆಎಲ್ ರಾಹುಲ್ ಮುಂದಿನ ಐಪಿಎಲ್ ನಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಲಕ್ನೋ ತಂಡಕ್ಕೆ ನಾಯಕರಾಗಲಿದ್ದಾರೆ.
ಇದುವರೆಗೆ ರಾಹುಲ್ ಆರ್ ಸಿಬಿ ಅಥವಾ ಲಕ್ನೋಗೆ ನಾಯಕರಾಗಬಹುದು ಎಂದು ಸುದ್ದಿಗಳಿತ್ತು. ಆದರೆ ಈಗ ಲಕ್ನೋ ತಂಡ ಸೇರಿಕೊಳ್ಳುವುದು ಖಚಿತವಾಗಿದೆ. ಮೂಲಗಳ ಪ್ರಕಾರ ಅವರೇ ಈ ಸೀಸನ್ ನ ಅತ್ಯಂತ ದುಬಾರಿ ಆಟಗಾರನಾಗಿರಬಹುದು ಎನ್ನಲಾಗಿದೆ.
ಟಿ20 ಪಂದ್ಯಗಳಲ್ಲಿ ರಾಹುಲ್ ರೆಕಾರ್ಡ್ ಅತ್ಯುತ್ತಮವಾಗಿದೆ. ಪಂಜಾಬ್ ನಾಯಕರಾಗಿ ಅವರಿಗೆ ಅದೃಷ್ಟ ಕೈ ಹಿಡಿದಿರಲಿಲ್ಲ. ಆದರೆ ಲಕ್ನೋ ತಂಡದಲ್ಲಿ ತಮ್ಮ ಅದೃಷ್ಟ ಖುಲಾಯಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.