Select Your Language

Notifications

webdunia
webdunia
webdunia
webdunia

ರಣವೀರ್ ಸಿಂಗ್ ‘83’ ಸಿನಿಮಾ ತಂಡದಲ್ಲಿ ಕಿಚ್ಚ ಸುದೀಪ್

ರಣವೀರ್ ಸಿಂಗ್ ‘83’ ಸಿನಿಮಾ ತಂಡದಲ್ಲಿ ಕಿಚ್ಚ ಸುದೀಪ್
ಬೆಂಗಳೂರು , ಬುಧವಾರ, 1 ಡಿಸೆಂಬರ್ 2021 (11:10 IST)
ಬೆಂಗಳೂರು: 1983 ರ ಏಕದಿನ ವಿಶ್ವಕಪ್ ವಿಜೇತ ತಂಡದ ಕತೆಯಾಧಾರಿತ ರಣವೀರ್ ಸಿಂಗ್ ನಾಯಕರಾಗಿರುವ ‘83’ ಸಿನಿಮಾ ತಂಡಕ್ಕೆ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ.

‘83’ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಕನ್ನಡದಲ್ಲಿ ಈ ಸಿನಿಮಾವನ್ನು ಕಿಚ್ಚ ಸುದೀಪ್ ಅರ್ಪಿಸಲಿದ್ದಾರೆ. ಈ ಸಿನಿಮಾದ ಟ್ರೈಲರ್ ಲಾಂಚ್ ಆಗಿದ್ದು ಜನರ ಮೆಚ್ಚುಗೆ ಪಡೆದಿದೆ.

ರಣವೀರ್ ಸಿಂಗ್ ಕ್ರಿಕೆಟ್ ದಂತಕತೆ ಕಪಿಲ್ ದೇವ್ ಪಾತ್ರ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ಇದ್ದಾರೆ. ಈ ಸಿನಿಮಾ ಡಿಸೆಂಬರ್ 4 ರಿಂದ ತೆರೆಗೆ ಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಸೆಂಬರ್ ನಲ್ಲಿ ಸೂಪರ್ ಡೂಪರ್ ಸಿನಿಮಾಗಳು ರಿಲೀಸ್