Publish Date: Wed, 01 Dec 2021 (08:40 IST)
Updated Date: Wed, 01 Dec 2021 (09:00 IST)
ಬೆಂಗಳೂರು: ಈ ಡಿಸೆಂಬರ್ ಸಿನಿ ಪ್ರಿಯರ ಪಾಲಿಗೆ ಸುಗ್ಗಿ ಕಾಲವಿದೆ. ಒಂದೆಡೆ ಕ್ರಿಸ್ ಮಸ್, ಒಂದೆಡೆ ನ್ಯೂ ಇಯರ್ ಸೆಲೆಬ್ರೇಷನ್. ಈ ವೀಕೆಂಡ್ ರಜಾಗಳ ಜೊತೆಗೆ ಸಾಲು ಸಾಲು ಬಹುನಿರೀಕ್ಷಿತ ಸಿನಿಮಾಗಳು ಪ್ರೇಕ್ಷಕರ ಎದುರಿಗೆ ಬರಲಿದೆ.
ಬಾಲಿವುಡ್ ನಲ್ಲಿ ಬಹುನಿರೀಕ್ಷಿತ 83 ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದರೆ, ತೆಲುಗಿನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಕ್ರಿಸ್ ಮಸ್ ಗೆ ತೆರೆಗೆ ಬರುತ್ತಿದೆ.
ಸ್ಯಾಂಡಲ್ ವುಡ್ ನಲ್ಲೂ ಅನೇಕ ಸಿನಿಮಾಗಳು ರಿಲೀಸ್ ಡೇಟ್ ಘೋಷಣೆ ಮಾಡಿವೆ. ಈ ಪೈಕಿ ಮದಗಜ ಡಿಸೆಂಬರ್ 3 ಕ್ಕೆ, ಅವತಾರ ಪುರುಷ ಡಿಸೆಂಬರ್ 10, ರೈಡರ್ ಡಿಸೆಂಬರ್ 24, ಬಡವ ರ್ಯಾಸ್ಕಲ್ ಡಿಸೆಂಬರ್ 24 ಕ್ಕೆ, ಲವ್ ಯೂ ರಚ್ಚು ಡಿಸೆಂಬರ್ 31ಕ್ಕೆ, ರಿಲೀಸ್ ಡೇಟ್ ಘೋಷಣೆ ಮಾಡಿದೆ. ಇದಲ್ಲದೆ, ಅರ್ಜುನ್ ಗೌಡ, ದೃಶ್ಯ 2 ಸಿನಿಮಾಗಳೂ ಡಿಸೆಂಬರ್ ನಲ್ಲಿ ತೆರೆ ಕಾಣುವ ನಿರೀಕ್ಷೆಯಿದೆ. ಇದಲ್ಲದೆ ಇನ್ನಷ್ಟು ಸಿನಿಮಾಗಳು ಇದೇ ತಿಂಗಳು ರಿಲೀಸ್ ಡೇಟ್ ಘೋಷಣೆ ಮಾಡಬಹುದು.