ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬದುಕಿದ್ದಾಗ ಮಾಡಿದ್ದ ಸಮಾಜಮುಖೀ ಕೆಲಸಗಳು ಈಗ ಒಂದೊಂದೇ ಬೆಳಕಿಗೆ ಬರುತ್ತಿದೆ.
ಇಂದು ಪುನೀತ್ ಸಮಾಧಿಗೆ ಭೇಟಿ ನೀಡಿದ ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ತಾಯಿ ಗೌರಮ್ಮ ಪುನೀತ್ ಹಿಂದೆ ಮಾಡಿದ್ದ ಸಹಾಯ ನೆನೆಸಿಕೊಂಡಿದ್ದಾರೆ.
ಡಿಕೆ ರವಿ ತಾಯಿ ಗೌರಮ್ಮ ಪುನೀತ್ ಸಮಾಧಿ ಬಳಿ ಬಂದು ಕಣ್ಣೀರು ಹಾಕಿದ್ದು, ಹಿಂದೆ ನನ್ನ ಮಗ ತೀರಿಕೊಂಡಾಗ ಪುನೀತ್ ಅವರು 50 ಸಾವಿರ ರೂ. ಹಣ ಕೊಟ್ಟಿದ್ದರು ಎಂದು ನೆನೆಸಿಕೊಂಡಿದ್ದಾರೆ. ಏನೇ ಕಷ್ಟ ಇದ್ದರೂ ನಮ್ಮ ಬಳಿ ಬನ್ನಿ. ನಿಮ್ಮ ಜೊತೆ ನಾವಿದ್ದೇವೆ ಎಂದು ಸಮಾಧಾನ ಮಾಡಿದ್ದರು. ಈಗ ಅವರೇ ಇಲ್ಲ ಎಂದು ಹೇಳುತ್ತಾ ಗೌರಮ್ಮ ಕಣ್ಣೀರು ಹಾಕಿದ್ದಾರೆ.