Publish Date: Mon, 29 Nov 2021 (11:33 IST)
Updated Date: Mon, 29 Nov 2021 (11:34 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾವನ್ನಪ್ಪಿ ಇಂದಿಗೆ ಒಂದು ತಿಂಗಳು ಕಳೆದ ಹಿನ್ನಲೆಯಲ್ಲಿ ಕುಟುಂಬಸ್ಥರು ಅವರ ಸಮಾಧಿಗೆ ಭೇಟಿ ನೀಡಿದ್ದಾರೆ.
ಸಹೋದರ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಪುನೀತ್ ಪತ್ನಿ ಅಶ್ವಿನಿ, ಮಗಳು ವಂದಿತಾ ಸೇರಿದಂತೆ ಕುಟುಂಬಸ್ಥರು ಬೆಳಿಗ್ಗೆಯೇ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಪುನೀತ್ ಮನೆಯಲ್ಲೂ ಪೂಜೆ ನಡೆಯಲಿದೆ.
ಇನ್ನು, ಇಂದು ಪುನೀತ್ ಮಾಸಿಕ ಪುಣ್ಯಸ್ಮರಣೆ ಅಂಗವಾಗಿ ಅಭಿಮಾನಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾಧಿಯತ್ತ ಭೇಟಿ ನೀಡುತ್ತಿದ್ದಾರೆ.