Publish Date: Mon, 29 Nov 2021 (08:50 IST)
Updated Date: Mon, 29 Nov 2021 (09:01 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಠಾತ್ ನಿಧನವಾಗಿ ಇಂದಿಗೆ ಒಂದು ತಿಂಗಳಾಗಿದೆ.
ಈ ಹಿನ್ನಲೆಯಲ್ಲಿ ಇಂದು ಪುನೀತ್ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಅವರನ್ನು ನೆನೆಸಿಕೊಂಡಿದ್ದಾರೆ. ನಿನ್ನೆಯೇ ಪುನೀತ್ ಸ್ಮರಣಾರ್ಥ ಬೈಕ್ ರ್ಯಾಲಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಇದರ ಜೊತೆಗೆ ಅಭಿಮಾನಿಗಳೂ ಮಾಸಿಕ ಪುಣ್ಯ ಸ್ಮರಣೆ ಮಾಡುತ್ತಿದ್ದಾರೆ. ಅಕ್ಟೋಬರ್ 29 ರಂದು ಯಾರೂ ಊಹಿಸದ ಆಘಾತ ಇಡೀ ಕರುನಾಡಿಗೇ ಬಂದಿತ್ತು. ಹೃದಯ ಸ್ತಂಬನದಿಂದಾಗಿ ಪುನೀತ್ ನಮ್ಮನ್ನಗಲಿದ್ದರು.