Publish Date: Sun, 28 Nov 2021 (10:04 IST)
Updated Date: Sun, 28 Nov 2021 (10:08 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗೆ ಕಿಚ್ಚ ಸುದೀಪ್ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಪುನೀತ್ ಅಭಿಮಾನಿ ಬೆನಕ ಎಂಬವರ ತಾಯಿಗೆ ಅಪಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಐಸಿಯುವಿನಲ್ಲಿದ್ದ ತಾಯಿ ಚಿಕಿತ್ಸೆಗೆ ಹಣವಿಲ್ಲದೇ ಬೆನಕ ಒದ್ದಾಡುತ್ತಿದ್ದರು. ಇದುವರೆಗೆ ಏನೇ ಕಷ್ಟ ಬಂದರೂ ಪುನೀತ್ ಅವರ ನೆರವಿಗೆ ಬರುತ್ತಿದ್ದರು. ಆದರೆ ಈಗ ಪುನೀತ್ ಇಲ್ಲದ ಕಾರಣ ಬೆನಕ ಕಿಚ್ಚ ಸುದೀಪ್ ಅವರ ಚ್ಯಾರಿಟೇಬಲ್ ಸೊಸೈಟಿಯನ್ನು ಸಂಪರ್ಕಿಸಿದ್ದಾರೆ.
ಇದೀಗ ತಮ್ಮ ಚ್ಯಾರಿಟಿ ಕಡೆಯಿಂದ ಕಿಚ್ಚ ಸುದೀಪ್ ಅಪ್ಪು ಅಭಿಮಾನಿ ತಾಯಿಯ ಚಿಕಿತ್ಸೆಗೆ ಹಣ ಸಹಾಯ ಮಾಡಿದ್ದಾರೆ ಎಂದು ತಿಳಿದುಬಂದಿದೆ.