ಬೆಂಗಳೂರು: ಅಜೇಯ್ ರಾವ್-ರಚಿತಾ ರಾಂ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಲವ್ ಯೂ ರಚ್ಚು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
ಸ್ಟಂಟ್ ಮ್ಯಾನ್ ಸಾವು, ಹಾಟ್ ಹಾಡು ಇತ್ಯಾದಿ ಕಾರಣಗಳಿಂದ ಭಾರೀ ಸುದ್ದಿಯಾಗಿದ್ದ ಲವ್ ಯೂ ರಚ್ಚು ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ರಚಿತಾ ರಾಂ ಮೊದಲ ಬಾರಿಗೆ ಗೃಹಿಣಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಅಲ್ಲದೆ ಹೀರೋ ಅಜೇಯ್ ರಾವ್ ಪುತ್ರಿ ಚರಿಷ್ಮಾ ಕೂಡಾ ಪುಟ್ಟ ಪಾತ್ರವೊಂದನ್ನು ಮಾಡಿದ್ದಾರೆ.
ಈ ಸಿನಿಮಾ ಡಿಸೆಂಬರ್ ನಲ್ಲಿ ತೆರೆ ಕಾಣಲಿದೆ. ಲಾಕ್ ಡೌನ್, ಕೊರೋನಾ ನಡುವೆಯೂ ಬಿಡುಗಡೆಯಾಗುತ್ತಿರುವ ಅಜೇಯ್ ರಾವ್ ಅಭಿನಯದ ಎರಡನೇ ಸಿನಿಮಾ ಇದಾಗಿದೆ.