Publish Date: Mon, 29 Nov 2021 (10:47 IST)
Updated Date: Mon, 29 Nov 2021 (10:49 IST)
ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಟಿ ಕಾವ್ಯಾ ಗೌಡ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಡಿಸೆಂಬರ್ 2 ರಂದು ಕಾವ್ಯಾ ತಾವು ಮೆಚ್ಚಿದ ಸೋಮಶೇಖರ್ ಎಂಬವರ ಜೊತೆ ಮದುವೆಯಾಗುತ್ತಿದ್ದಾರೆ.
ಲಾಕ್ ಡೌನ್ ಗೂ ಮೊದಲೇ ಕಾವ್ಯಾ ತಮ್ಮ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದರು. ತಮ್ಮ ಹುಡುಗನ ಜೊತೆಗಿನ ಫೋಟೋಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ಈಗಾಗಲೇ ಬ್ಯಾಚುಲರ್ ಪಾರ್ಟಿ ಮಾಡಿಕೊಂಡಿದ್ದಾರೆ. ಇಂದಿನಿಂದ ಕಾವ್ಯಾ ಮದುವೆ ಶಾಸ್ತ್ರಗಳು ಆರಂಭವಾಗುತ್ತಿವೆ. ಕಾವ್ಯಾಗೆ ಇದು ಅರೇಂಜ್ಡ್ ಮದುವೆಯಾಗಿದ್ದು, ದುಬೈನಲ್ಲಿ ಉದ್ಯಮಿಯಾಗಿರುವ ಸೋಮಶೇಖರ್ ಕೈ ಹಿಡಿಯುತ್ತಿದ್ದಾರೆ.