Publish Date: Thu, 02 Dec 2021 (09:20 IST)
Updated Date: Thu, 02 Dec 2021 (09:27 IST)
ಚೆನ್ನೈ: ಈ ಬಾರಿ ಐಪಿಎಲ್ 2022 ರಲ್ಲಿ ನಾಯಕ ಧೋನಿ ಸಹ ಆಟಗಾರ ರವೀಂದ್ರ ಜಡೇಜಾಗಿಂತಲೂ ಕಡಿಮೆ ವೇತನ ಪಡೆಯಲಿದ್ದಾರೆ. ಅಂದರೆ ಉಳಿಸಿಕೊಳ್ಳುವ ಆಟಗಾರರ ಲಿಸ್ಟ್ ನಲ್ಲಿ ಎರಡನೆಯ ಆಟಗಾರನಾಗಿ ಧೋನಿ ಆಯ್ಕೆಯಾಗಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ?
ಧೋನಿ ಎರಡನೆಯ ಆಟಗಾರನಾಗಿರುವುದರಿಂದ ಅವರಿಗೆ 12 ಕೋಟಿ ರೂ. ವೇತನ ಸಿಗಲಿದೆ. ಆದರೆ ಜಡೇಜಾ ಮೊದಲ ಆಟಗಾರನಾಗಿ ಆಯ್ಕೆಯಾಗಿದ್ದು ಅವರಿಗೆ 16 ಕೋಟಿ ರೂ. ವೇತನ ಸಿಗಲಿದೆ.
ಇದರ ಹಿಂದೆ ಧೋನಿ ಸಲಹೆಯೇ ಕಾರಣ ಎನ್ನಲಾಗಿದೆ. ಹೊಸಬರಿಗೆ ಹೆಚ್ಚಿನ ಹಣ ಸಿಗಲಿ ಎನ್ನುವ ಕಾರಣಕ್ಕೆ ಧೋನಿ ತಮ್ಮನ್ನು ಎರಡನೇ ಆಟಗಾರನಾಗಿ ಆಯ್ಕೆ ಮಾಡಲು ಹೇಳಿದರಂತೆ.