ಮುಂಬೈ: ಐಪಿಎಲ್ 2022 ರ ಮೆಗಾ ಹರಾಜು ಪ್ರಕ್ರಿಯೆಗೆ ಕೆಲವೇ ದಿನಗಳು ಬಾಕಿಯಿದ್ದು, ಇಂದು ರಿಟೈನಿಂಗ್ ಪ್ಲೇಯರ್ಸ್ ಲಿಸ್ಟ್ ಹೊರಬೀಳಲಿದೆ.
ಇದೀಗ ಹೆಚ್ಚಿನ ತಂಡಗಳು ಹೊಸ ನಾಯಕನ ಹುಡುಕಾಟದಲ್ಲಿವೆ. ಹೊಸ ಎರಡು ತಂಡಗಳ ಪೈಕಿ ಲಕ್ನೋ ತಂಡಕ್ಕೆ ರಾಹುಲ್ ನಾಯಕರಾಗುವುದು ಬಹುತೇಕ ಖಚಿತವಾಗಿದೆ.
ಇನ್ನು, ಕಿಂಗ್ಸ್ ಪಂಜಾಬ್ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳೂ ನಾಯಕನ ಹುಡುಕಾಟದಲ್ಲಿದೆ. ಉಳಿದಂತೆ ಚೆನ್ನೈ, ಮುಂಬೈ, ಹೈದರಾಬಾದ್, ಡೆಲ್ಲಿ ಹಿಂದಿನ ನಾಯಕರನ್ನೇ ಮುಂದುವರಿಸಿಕೊಂಡು ಹೋಗಲಿವೆ. ಹೀಗಾಗಿ ನಾಯಕತ್ವದ ಗುಣವುಳ್ಳ ಸಮರ್ಥ ಆಟಗಾರರಿಗೆ ಹೆಚ್ಚು ಬೇಡಿಕೆಯಿದೆ.