Publish Date: Wed, 01 Dec 2021 (09:00 IST)
Updated Date: Wed, 01 Dec 2021 (09:10 IST)
ಮುಂಬೈ: ಫಾರ್ಮ್ ಕಳೆದುಕೊಂಡು ಟೀಕೆಗೊಳಗಾಗುತ್ತಿರುವ ಟೀಂ ಇಂಡಿಯಾ ಹಂಗಾಮಿ ನಾಯಕ ಅಜಿಂಕ್ಯಾ ರೆಹಾನೆಗೆ ಕೋಚ್ ರಾಹುಲ್ ದ್ರಾವಿಡ್ ಬೆಂಬಲ ಸಿಕ್ಕಿದೆ.
ರೆಹಾನೆ ಫಾರ್ಮ್ ಬಗ್ಗೆ ಮಾತನಾಡಿರುವ ದ್ರಾವಿಡ್, ರೆಹಾನೆ ಒಬ್ಬ ಕ್ಲಾಸ್ ಆಟಗಾರ. ಒಂದು ಒಳ್ಳೆಯ ಇನಿಂಗ್ಸ್ ಅವರ ಪರಿಸ್ಥಿತಿ ಬದಲಾಯಿಸಲಿದೆ ಎಂದಿದ್ದಾರೆ.
ಮುಂದಿನ ಟೆಸ್ಟ್ ಪಂದ್ಯಕ್ಕೆ ನಾಯಕ ಕೊಹ್ಲಿ ಪುನರಾಗಮನವಾಗಲಿದ್ದು, ಈ ವೇಳೆ ತಂಡದಿಂದ ರೆಹಾನೆ ಅಥವಾ ಪೂಜಾರರನ್ನು ಕೈ ಬಿಡುವ ಸಾಧ‍್ಯತೆಯಿದೆ. ಇದರ ಬೆನ್ನಲ್ಲೇ ದ್ರಾವಿಡ್ ಬೆಂಬಲ ಸಿಕ್ಕಿರುವುದು ರೆಹಾನೆಗೆ ಬಲ ಸಿಕ್ಕಂತಾಗಿದೆ.